ಕರ್ನಾಟಕ

karnataka

ETV Bharat / bharat

'ಯಶಸ್ವಿ ಆಪರೇಷನ್ ಗಂಗಾದಿಂದ ಭಾರತದ ವರ್ಚಸ್ಸು ಹೆಚ್ಚಳ: ದೊಡ್ಡ ರಾಷ್ಟ್ರಗಳಿಗೆ ಇನ್ನೂ ಸವಾಲು' - ಪ್ರಧಾನಿ ನರೇಂದ್ರ ಮೋದಿ

ಉಕ್ರೇನ್‌ನ ಯುದ್ಧ ಭೂಮಿಯಿಂದ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ತಮ್ಮ ತಾಯ್ನಾಡಿಗೆ ಮರಳಿ ಕರೆತಂದಿದ್ದೇವೆ. ಆದರೆ, ಇತರೆ ಅನೇಕ ದೊಡ್ಡ ದೇಶಗಳು ತಮ್ಮ ನಾಗರಿಕರನ್ನು ತವರಿಗೆ ಕರೆತರಲು ಸವಾಲುಗಳನ್ನು ಎದುರಿಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

By

Published : Mar 6, 2022, 7:56 PM IST

ಪುಣೆ (ಮಹಾರಾಷ್ಟ್ರ): ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಿಸಲು ಆರಂಭಿಸಿದ 'ಆಪರೇಷನ್ ಗಂಗಾ'ದ ಯಶಸ್ಸಿಯಿಂದ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಇನ್ನೂ ಹೆಚ್ಚಳವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವರ್ಣಿಸಿದ್ದಾರೆ.

ಪುಣೆಯಲ್ಲಿ ಭಾನುವಾರ ಸಿಂಬಯಾಸಿಸ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಮಾತನಾಡಿದ ಅವರು, ನಾವು ಆಪರೇಷನ್ ಗಂಗಾ ಮೂಲಕ ಸಾವಿರಾರು ಭಾರತೀಯರನ್ನು ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಸ್ಥಳಾಂತರಿಸುತ್ತಿದ್ದೇವೆ ತಿಳಿಸಿದ್ದಾರೆ.

ಉಕ್ರೇನ್‌ನ ಯುದ್ಧ ಭೂಮಿಯಿಂದ ಸಾವಿರಾರು ವಿದ್ಯಾರ್ಥಿಗಳನ್ನು ತಮ್ಮ ತಾಯ್ನಾಡಿಗೆ ಮರಳಿ ಕರೆತಂದಿದ್ದೇವೆ. ಇದು ಭಾರತದ ಪ್ರಭಾವ ಹೆಚ್ಚುವಂತೆ ಮಾಡಿದೆ. ಆದರೆ, ಇತರೆ ಅನೇಕ ದೊಡ್ಡ ದೇಶಗಳು ತಮ್ಮ ನಾಗರಿಕರನ್ನು ತವರಿಗೆ ಸ್ಥಳಾಂತರ ಮಾಡಿಕೊಳ್ಳಲು ಸವಾಲುಗಳನ್ನು ಎದುರಿಸುತ್ತಿವೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ:ಉಕ್ರೇನ್​ನಿಂದ​ ಹಂಗೇರಿ ದೇಶಕ್ಕೆ ತಲುಪಲು ವಿದ್ಯಾರ್ಥಿಗಳಿಗೆ ಸೂಚನೆ: 'ಆಪರೇಷನ್ ಗಂಗಾ' ಕೊನೆ ಹಂತ?

ಉಕ್ರೇನ್‌ನಲ್ಲಿ ಯುದ್ಧ ಉಲ್ಬಣಗೊಳ್ಳುತ್ತಿರುವ ಮಧ್ಯೆ ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಹೆಸರಲ್ಲಿ ಭಾರತೀಯರ ಸ್ಥಳಾಂತರ ಕಾರ್ಯಾಚರಣೆ ನಡೆಸಿದೆ. ಇದುವರೆಗೆ 13,700 ಭಾರತದ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗಿದೆ.

ABOUT THE AUTHOR

...view details