ಕರ್ನಾಟಕ

karnataka

ETV Bharat / bharat

ಅಂಬೇಡ್ಕರ್​ 130ನೇ ಜನ್ಮ ದಿನಾಚರಣೆ: ರಾಷ್ಟ್ರಪತಿ, ಪ್ರಧಾನಿ ಶುಭಾಶಯ - ಅಂಬೇಡ್ಕರ್​ ಜನ್ಮ ದಿನಾಚರಣೆ

ಇಂದು ಭಾರತದ ಸಂವಿಧಾನ ಶಿಲ್ಪಿ, ಡಾ.ಭೀಮರಾವ್​ ರಾಮ್​ಜೀ ಅಂಬೇಡ್ಕರ್​ ಅವರ 130ನೇ ಜನ್ಮದಿನಾಚರಣೆ. ಈ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

modi
ಶುಭಾಶಯ ಕೋರಿದ ಪ್ರಧಾನಿ

By

Published : Apr 14, 2021, 8:13 AM IST

Updated : Apr 14, 2021, 8:48 AM IST

ನವದೆಹಲಿ:ಶತಮಾನದ ಮಹಾನ್​ ದಾರ್ಶನಿಕ, ಸಮಾನತೆಯ ಹರಿಕಾರ, ಅಸ್ಪೃಶ್ಯತೆ-ಅಸಮಾನತೆ ವಿರುದ್ಧ ಹೋರಾಡಿದ ಡಾ.ಬಿ.ಆರ್‌.ಅಂಬೇಡ್ಕರ್​ ಜನ್ಮದಿನವನ್ನು ದೇಶಾದ್ಯಂತ ಆಚರಿಸಿ ಗೌರವ ವಂದನೆ ಸಲ್ಲಿಸಲಾಗುತ್ತಿದೆ.

ಮಹಾನ್ ನಾಯಕನ ಜೀವನ, ವಿಚಾರಗಳು ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.

ಸಮಾಜದ ವಂಚಿತ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಅವರ ಹೋರಾಟವು ಪ್ರತಿ ಪೀಳಿಗೆಗೆ ಉದಾಹರಣೆಯಾಗಿ ಮುಂದುವರಿಯುತ್ತದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್​ಗೆ​ 130ನೇ ಜನ್ಮ ದಿನಾಚರಣೆ

Last Updated : Apr 14, 2021, 8:48 AM IST

ABOUT THE AUTHOR

...view details