ಗಾಂಧಿನಗರ(ಗುಜರಾತ್): ಮೊಧೇರಾ ಸೂರ್ಯ ಮಂದಿರ ಅಭಿವೃದ್ಧಿ ಮತ್ತು ಸೌರವ್ಯೂಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅಕ್ಟೋಬರ್ 9 ರಂದು ಗುಜರಾತ್‌ಗೆ ಭೇಟಿ ನೀಡಲಿದ್ದು, ಮೊಧೇರಾ ಸೌರ ವಿದ್ಯುತ್ ಯೋಜನೆಯ ಕುರಿತು ಮಾತನಾಡಲಿದ್ದಾರೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಶುದ್ಧ ಇಂಧನ ಉತ್ಪಾದಿಸುವ ಪ್ರಧಾನಿ ಅವರ ದೂರದೃಷ್ಟಿ ಸಾಕಾರಗೊಳಿಸುವಲ್ಲಿ ಗುಜರಾತ್ ಮತ್ತೊಮ್ಮೆ ಮುಂದಾಳತ್ವ ವಹಿಸಿರುವುದು ಸಂತಸ ತಂದಿದೆ. 2030ರ ವೇಳೆಗೆ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಮೂಲಕ ಭಾರತದ ಶೇ 50 ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ನಮ್ಮ ಬದ್ಧತೆಯನ್ನು ಅರಿತುಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಸೌರಶಕ್ತಿಯಿಂದ ಬೆಳಗಿದ ದೇಶದ ಮೊದಲ ಸೌರಗ್ರಾಮ ಮೊಧೇರಾ ಮೊಧೇರಾ ಸೂರ್ಯ ದೇವಾಲಯದಿಂದ ಸುಮಾರು 6 ಕಿಮೀ ದೂರದಲ್ಲಿರುವ ಮೆಹ್ಸಾನಾದ ಸಜ್ಜನಪುರದಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ನೊಂದಿಗೆ ಸಂಯೋಜಿಸಲ್ಪಟ್ಟ ಸೌರ ವಿದ್ಯುತ್ ಯೋಜನೆಯ ಮೂಲಕ ಮೊಧೇರಾಗೆ 24x7 ಸೌರ ಶಕ್ತಿ ಒದಗಿಸುವ ಮೂಲಕ ಮೊಧೇರಾ ಸೂರ್ಯ ಮಂದಿರ ಮತ್ತು ಪಟ್ಟಣವನ್ನು ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರ ಸೌರೀಕರಣಗೊಳಿಸಿದೆ. ಈ ಮೂಲಕ ಮೊದಲ ಸೌರಶಕ್ತಿ ಚಾಲಿತ ಗ್ರಾಮವಾಗಿ ಮೊಧೇರಾ ಗುರುತಿಸಿಕೊಂಡಿದೆ.
ಸೌರಶಕ್ತಿ ಚಾಲಿತ ಗ್ರಾಮ ಯೋಜನೆ ಅಭಿವೃದ್ಧಿಗೆ ಗುಜರಾತ್ ಸರ್ಕಾರ 12 ಹೆಕ್ಟೇರ್ ಭೂಮಿ ಮಂಜೂರು ಮಾಡಿದೆ. ಭಾರತ ಮತ್ತು ಗುಜರಾತ್ ಸರ್ಕಾರ 50-50 ಆಧಾರದ ಮೇಲೆ ಮೊದಲ ಹಂತದಲ್ಲಿ 69 ಕೋಟಿ ಹಾಗೂ ಎರಡನೇ ಹಂತದಲ್ಲಿ 11.66 ಕೋಟಿ ಅಂದರೆ ಒಟ್ಟು 80.66 ಕೋಟಿ ಖರ್ಚು ಮಾಡಿದೆ.
ಸೌರಶಕ್ತಿಯಿಂದ ಬೆಳಗಿದ ದೇಶದ ಮೊದಲ ಸೌರಗ್ರಾಮ ಮೊಧೇರಾ ಮೊಧೇರಾ ಗ್ರಾಮದಲ್ಲಿರುವ ಮನೆಗಳ ಮೇಲೆ 1 KW ನ 1300 ಕ್ಕೂ ಹೆಚ್ಚು ಛಾವಣಿಯ ಸೌರ ವ್ಯವಸ್ಥೆಗಳನ್ನು (ರೂಪ್ಟಾಪ್ ಸೋಲಾರ್ ಸಿಸ್ಟಮ್) ಸ್ಥಾಪಿಸಲಾಗಿದೆ. ಸೌರ ಫಲಕಗಳಿಂದ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಸಂಜೆ ವೇಳೆಗೆ ಮನೆಗಳಿಗೆ ಬಿಇಎಸ್‌ಎಸ್ ಮೂಲಕ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಈ ಯೋಜನೆಯ ಮೂಲಕ ಮೊಧೇರಾ ಗ್ರಾಮ ನಿವ್ವಳ ನವೀಕರಿಸಬಹುದಾದ (ನೆಟ್ ರಿನ್ಯೂವೇಬಲ್) ಇಂಧನವನ್ನು ಉತ್ಪಾದಿಸುವ ಭಾರತದ ಮೊದಲ ಗ್ರಾಮವಾಗಲಿದೆ.
ಸೌರಶಕ್ತಿಯಿಂದ ಬೆಳಗಿದ ದೇಶದ ಮೊದಲ ಸೌರಗ್ರಾಮ ಮೊಧೇರಾ ಅಲ್ಟ್ರಾ ಆಧುನಿಕ ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ಮೊದಲ ಆಧುನಿಕ ಗ್ರಾಮ ಎನ್ನುವ ಕಿರೀಟವೂ ಮೊಧೇರಾ ಗ್ರಾಮದ ಪಾಲಾಗಲಿದೆ. ಭಾರತದ ಮೊದಲ ಗ್ರಿಡ್ ಸಂಪರ್ಕಿತ MWH ಸ್ಕೇಲ್ ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ ಇಲ್ಲಿದ್ದು, ಜನರು ತಮ್ಮ ವಿದ್ಯುತ್ ಬಿಲ್‌ಗಳಲ್ಲಿ 60 ರಿಂದ 100 ಪ್ರತಿಶತದಷ್ಟು ಉಳಿತಾಯ ಮಾಡುತ್ತಾರೆ.
ಸೌರಶಕ್ತಿಯಿಂದ ಬೆಳಗಿದ ದೇಶದ ಮೊದಲ ಸೌರಗ್ರಾಮ ಮೊಧೇರಾ ಮುಂದಿನ ದಿನಗಳಲ್ಲಿ ಸೂರ್ಯ ಮಂದಿರದಲ್ಲಿ ಸೌರಶಕ್ತಿಯಿಂದ ಹೆರಿಟೇಜ್ ಲೈಟಿಂಗ್‌ಗಳು ಮತ್ತು 3ಡಿ ಪ್ರೊಜೆಕ್ಷನ್ ಕಾರ್ಯನಿರ್ವಹಿಸಲಿದೆ. ಈ 3ಡಿ ಪ್ರೊಜೆಕ್ಷನ್ ಮೂಲಕ ಪ್ರವಾಸಿಗರಿಗೆ ಸಂಜೆ 15 ರಿಂದ 18 ನಿಮಿಷಗಳ ಕಾಲ ಮೊಧೇರಾದ ಇತಿಹಾಸವನ್ನು ಪರಿಚಯಿಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಪರಂಪರೆಯ ದೀಪಗಳನ್ನು ಅಳವಡಿಸಲಾಗಿದೆ. ಈ ದೀಪಾಲಂಕಾರವನ್ನು ನೋಡಲು ಜನರು ಈಗ ಸಂಜೆ 6 ರಿಂದ ರಾತ್ರಿ 10 ರವರೆಗೆ ದೇವಸ್ಥಾನಕ್ಕೆ ಭೇಟಿ ನೀಡಬಹುದು. 3ಡಿ ಪ್ರೊಜೆಕ್ಷನ್ ನಿತ್ಯ ಸಂಜೆ 7 ರಿಂದ 7.30 ರವರೆಗೆ ಕಾರ್ಯನಿರ್ವಹಿಸುತ್ತದೆ.
ಸೌರಶಕ್ತಿಯ ಬಳಕೆಯಿಂದ ಗ್ರಾಮದ ಜನರ ಜೀವನಮಟ್ಟ ಅಭಿವೃದ್ಧಿಯಾಗಿದೆ. ಮೊದಲು 1 ಸಾವಿರಕ್ಕಿಂತ ಹೆಚ್ಚು ಬಿಲ್ ಬರುತ್ತಿತ್ತು, ಈಗ ಅದು ಶೂನ್ಯವಾಗಿದೆ. ವೆಚ್ಚವಿಲ್ಲದೆ ಎಲ್ಲ ಮನೆಗಳಿಗೂ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ನಮ್ಮ ವಿದ್ಯುತ್ ಸಂಗ್ರಹವಾದರೆ ನಮಗೂ ಹೆಚ್ಚುವರಿ ಹಣ ನೀಡಲಾಗುತ್ತದೆ ಎಂದು ಮೊಧೇರಾ ಸರಪಂಚ್ ಜತನ್‌ಬೆನ್ ಠಾಕೂರ್ ಹೇಳಿದರು.
ಇದನ್ನೂ ಓದಿ:ಹಸಿರಾಗಲಿದೆ ನೈಋತ್ಯ ರೈಲ್ವೆ: ಉಸಿರು ನೀಡುವ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ