ಕರ್ನಾಟಕ

karnataka

ETV Bharat / bharat

COVID ವಿರುದ್ಧ ಮತ್ತೊಂದು ಅಸ್ತ್ರ: ಶೀಘ್ರವೇ ಭಾರತಕ್ಕೆ ಮಾಡರ್ನಾ ಲಸಿಕೆ!

COVID ವಿರುದ್ಧದ ಹೋರಾಟ ಮುಂದುವರಿದಿದೆ. ಈ ನಿಟ್ಟಿನಲ್ಲಿ ಮಾಡರ್ನಾದ ಕೋವಿಡ್ -19 ಮೆಸೆಂಜರ್ ಆರ್‌ಎನ್‌ಎ (ಎಂಆರ್‌ಎನ್‌ಎ) ಲಸಿಕೆ ಕೆಲವು ಅಧಿಕೃತ ಔಪಚಾರಿಕತೆ ಪೂರ್ಣಗೊಂಡ ಬಳಿಕ ಈ ವಾರ ಭಾರತಕ್ಕೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Moderna mRNA
GAVI ಅಲೈಯನ್ಸ್

By

Published : Jul 6, 2021, 9:53 AM IST

ನವದೆಹಲಿ: ಅಮೆರಿಕದ ದೈತ್ಯ ಔಷಧ ತಯಾರಕ ಮಾಡರ್ನಾದ ಕೋವಿಡ್ -19 ಮೆಸೆಂಜರ್ ಆರ್‌ಎನ್‌ಎ (ಎಂಆರ್‌ಎನ್‌ಎ) ಲಸಿಕೆ ಕೆಲವು ಅಧಿಕೃತ ಔಪಚಾರಿಕತೆ ಪೂರ್ಣಗೊಂಡ ಬಳಿಕ ಈ ವಾರ ಭಾರತಕ್ಕೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ. ಲಸಿಕೆಗಳನ್ನು ಪಡೆದ ನಂತರ ಅದನ್ನು ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಲಾಗುತ್ತದೆ.

"GAVI ಯುಎಸ್ ಸರ್ಕಾರ ಮತ್ತು ಇತರ ಪಾಲುದಾರರ ಸಹಕಾರದೊಂದಿಗೆ ಡೋಸ್​ಗಳ ದೇಣಿಗೆಗಳನ್ನು ಕಾರ್ಯಗತಗೊಳಿಸಲು ಮತ್ತು ಡೋಸೇಜ್‌ಗಳನ್ನು ಆದಷ್ಟು ಬೇಗನೆ ತಲುಪಿಸಲು ಕೆಲಸ ಮಾಡಲಾಗುತ್ತಿದೆ. ಮಾಡರ್ನಾ ಲಸಿಕೆಯನ್ನು ಭಾರತಕ್ಕೆ ತಲುಪಿಸುವ ಕುರಿತು ಮಾಧ್ಯಮಕ್ಕೆ GAVI ಅಲೈಯನ್ಸ್‌ನ ವಕ್ತಾರರು ಮಾಹಿತಿ ನೀಡಿದ್ದಾರೆ.

GAVI ಅಲೈಯನ್ಸ್ (ಲಸಿಕೆಗಳು ಮತ್ತು ರೋಗನಿರೋಧಕಗಳ ಜಾಗತಿಕ ಒಕ್ಕೂಟ) ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳ ಜಾಗತಿಕ ಆರೋಗ್ಯ ಸಹಭಾಗಿತ್ವವಾಗಿದೆ. ನೀತಿಗಳು, ಕಾರ್ಯತಂತ್ರಗಳು ಮತ್ತು ಆದ್ಯತೆಗಳ ಸುತ್ತ ಒಮ್ಮತವನ್ನು ನಿರ್ಮಿಸಲು ಮತ್ತು ಹೆಚ್ಚಿನ ಅನುಭವ, ಒಳನೋಟವನ್ನು ಹೊಂದಿರುವ ಪಾಲುದಾರನಿಗೆ ಅನುಷ್ಠಾನದ ಜವಾಬ್ದಾರಿಯನ್ನು ಶಿಫಾರಸು ಮಾಡಲು ಅವಕಾಶವನ್ನು ಒದಗಿಸುತ್ತದೆ.

ಕಳೆದ ವಾರ, ಮಾಡರ್ನಾ ಇಂಕ್‌ನ ಕೊರೊನಾ ಲಸಿಕೆಯನ್ನು ದೇಶದಲ್ಲಿ ವಿತರಿಸಲು ಭಾರತೀಯ ಔಷಧಿ ತಯಾರಕ ಸಿಪ್ಲಾ ಲಿಮಿಟೆಡ್ ನಿಯಂತ್ರಣ ಅನುಮೋದನೆ ಪಡೆದಿದೆ.

ABOUT THE AUTHOR

...view details