ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮಾಡರ್ನಾ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(DCGI) ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಇಲಾಖೆ ನೀತಿ ಆಯೋಗದ ಸದಸ್ಯ ವಿ.ಕೆ ಪಾಲ್ ತಿಳಿಸಿದ್ದಾರೆ.
ಭಾರತದಲ್ಲಿ ಸದ್ಯ ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ವಿ ಹಾಗೂ ಮಾಡರ್ನಾ ಲಸಿಕೆಗಳು ಲಭ್ಯವಿದ್ದು, ಬರುವ ದಿನಗಳಲ್ಲಿ ಫೈಜರ್ ಲಸಿಕೆ ಕೂಡ ಬಳಕೆ ಮಾಡಲು ನಿರ್ಧರಿಸಲಾಗುವುದು ಎಂದು ಪಾಲ್ ತಿಳಿಸಿದ್ದಾರೆ.
ಕಳೆದ 136 ದಿನಗಳಲ್ಲಿ ಭಾರತ 32 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಿದ್ದು, 27.27 ಕೋಟಿ ಜನರಿಗೆ ಮೊದಲ ಹಂತದ ಲಸಿಕೆ ಹಾಗೂ 5.84 ಕೋಟಿ ಜನರಿಗೆ ಎರಡನೇ ಹಂತದ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಸದ್ಯ ಕೋವಿಡ್ ಗುಣಮುಖ ಪ್ರಮಾಣ ಶೇ. 96.9ರಷ್ಟು ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿರಿ: ಅಕ್ಟೋಬರ್ 17ರಿಂದ T-20 World Cup.. ICCಯಿಂದ ಮಹತ್ವದ ಮಾಹಿತಿ
18 ವರ್ಷ ಮೇಲ್ಪಟ್ಟವರಲ್ಲಿ ಮಾಡರ್ನಾ ಲಸಿಕೆ ಬಳಕೆ ಮಾಡಲಾಗುತ್ತಿದ್ದು, ಇನ್ಮುಂದೆ ಭಾರತದಲ್ಲೂ ಇದರ ಲಭ್ಯತೆ ಆಗಲಿದೆ. ಈಗಾಗಲೇ ರಷ್ಯಾದಲ್ಲಿ ತಯಾರುಗೊಂಡಿರುವ ಸ್ಪುಟ್ನಿಕ್ ವಿ ಭಾರತಕ್ಕೆ ಲಗ್ಗೆ ಹಾಕಿದ್ದು, ಹೈದರಾಬಾದ್ನ ರೆಡ್ಡೀಸ್ ಲ್ಯಾಬ್ನಲ್ಲಿ ಉತ್ಪಾದನೆ ಆಗುತ್ತಿದೆ.