ನವದೆಹಲಿ /ನೋಯ್ಡಾ: ಫ್ಯಾಷನ್ ಶೋ ವೇಳೆ ಅಲಂಕಾರಿಕ ಲೈಟಿಂಗ್ ಕಂಬ ಬಿದ್ದು ಮಾಡೆಲ್ ಒಬ್ಬರು ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಮೃತರನ್ನು ವಂಶಿಕಾ ಚೋಪ್ರಾ(24) ಎಂದು ಗುರುತಿಸಲಾಗಿದೆ. ಬಾಬಿ ರಾವ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ಭಾನುವಾರ ನೋಯ್ಡಾ ಫಿಲ್ಮ್ ಸಿಟಿಯಲ್ಲಿ ಫ್ಯಾಷನ್ ಶೋ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದ ವಂಶಿಕಾ ಮತ್ತು ಬಾಬಿ ರಾವ್ ಮೇಲೆ ವೇದಿಕೆಯಲ್ಲಿ ಅಳವಡಿಸಿದ್ದ ಅಲಂಕಾರಿಕ ಲೈಟಿಂಗ್ ಕಂಬ ಬಿದ್ದಿದೆ. ತಕ್ಷಣ ಗಂಭೀರ ಗಾಯಗೊಂಡ ಇಬ್ಬರನ್ನೂ ಇಲ್ಲಿನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವಂಶಿಕಾ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮತ್ತೊರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.