ನವದೆಹಲಿ: 1,188 ಕೋಟಿ ರೂ.ಗಳ ವೆಚ್ಚದಲ್ಲಿ 4,960 ಮಿಲನ್-2T ಆಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ಪೂರೈಸುವ ಸಂಬಂಧ ಕೇಂದ್ರ ರಕ್ಷಣಾ ಸಚಿವಾಲಯ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಫ್ರಾನ್ಸ್ ತಂತ್ರಜ್ಞಾನದಲ್ಲಿ ತಯಾರಾಗಲಿದೆ ಮಿಲನ್ 2T ಕ್ಷಿಪಣಿ: ಭಾರತ್ ಡೈನಾಮಿಕ್ಸ್ ಜೊತೆ ಒಪ್ಪಂದ
ಮಿಲನ್ -2T ಅನ್ನು ಫ್ರಾನ್ಸ್ ಮೂಲದ ರಕ್ಷಣಾ ಸಂಸ್ಥೆಯ ಪರವಾನಗಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಿಡಿಎಲ್ ತಯಾರಿಸಿದೆ.
4,960 ಎಟಿಜಿಎಂಗಳ ಪೂರೈಕೆಗೆ ಬಿಡಿಎಲ್ ಜೊತೆ ಒಪ್ಪಂದ
ಮಿಲನ್ -2T ಅನ್ನು ಫ್ರಾನ್ಸ್ ಮೂಲದ ರಕ್ಷಣಾ ಸಂಸ್ಥೆಯ ಪರವಾನಗಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಿಡಿಎಲ್ ತಯಾರಿಸಲಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಚಿವಾಲಯದ ಪ್ರಕಾರ, ಕ್ಷಿಪಣಿಗಳನ್ನು ನೆಲದಿಂದ ಮತ್ತು ವಾಹನ ಆಧಾರಿತ ಲಾಂಚರ್‌ಗಳಿಂದ ಹಾರಿಸಬಹುದಾಗಿದೆ. ಇವು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಯೇ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಈ ಯೋಜನೆ ಮೂಲಕ ಮತ್ತಷ್ಟು ಹೆಚ್ಚಿಸಲಿದೆ.