ಪಾಟ್ನಾ (ಬಿಹಾರ) :ರಾಜಧಾನಿ ಪಾಟ್ನಾದ ಪಿರ್ಬೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್ ಅನ್ನು ಖದೀಮರು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಮನೆಯ ಮಾಲೀಕರು ಅನುಮಾನಗೊಂಡು ಈ ಬಗ್ಗೆ ಮೊಬೈಲ್ ಟವರ್ ಕಂಪನಿ ಜಿಟಿಎಲ್‌ಗೆ ತಿಳಿಸಿದ್ದಾರೆ. ಬಳಿಕ ಕಂಪನಿಯ ಮ್ಯಾನೇಜರ್ ಪಿರ್ ಭೋರ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಹೀಗಾಗಿ, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
2006 ರಲ್ಲಿ ಮೊಬೈಲ್ ಟವರ್ ಅಳವಡಿಸಲಾಗಿತ್ತು: ಮಾಹಿತಿ ಪ್ರಕಾರ, 2006ರಲ್ಲಿ ಏರ್ಸೆಲ್ ಕಂಪನಿಗೆ ಸೇರಿದ್ದ ಈ ಮೊಬೈಲ್ ಟವರ್ ಅನ್ನು ಜಿಟಿಎಲ್ ಕಂಪನಿ ಖರೀದಿಸಿತ್ತು. ಲಿಖಿತ ಎಫ್‌ಐಆರ್‌ನಲ್ಲಿ ಜಿಟಿಎಲ್ ಕಂಪನಿಯ ಉದ್ಯೋಗಿಗಳು ಎಂದು ಹೇಳಿಕೊಂಡು ಕೆಲವರು ಮೊಬೈಲ್ ಟವರ್ ಅಳವಡಿಸಿದ ಮನೆಗೆ ಬಂದಿದ್ದರು ಎಂದು ಜಿಟಿಎಲ್ ಕಂಪನಿ ತಿಳಿಸಿದೆ. ಬಳಿಕ ಮನೆಯ ಮಾಳಿಗೆಗೆ ತೆರಳಿ 4 ಗಂಟೆಗಳ ಕಾಲ ಮೊಬೈಲ್ ಟವರ್ ತೆರೆದು ಅಲ್ಲಿಂದ ತೆರಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ: ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಳ್ಳರ ಪತ್ತೆಗೆ ಯತ್ನಿಸುತ್ತಿದ್ದಾರೆ. ಜಿಟಿಎಲ್ ಕಂಪನಿಯ ವ್ಯವಸ್ಥಾಪಕ ಮೊಹಮ್ಮದ್ ಶಹನವಾಜ್ ಅನ್ವರ್ ಪ್ರಕಾರ, ಮೊಬೈಲ್ ಟವರ್‌ನ ಒಟ್ಟು ವೆಚ್ಚ 8 ಲಕ್ಷ 32 ಸಾವಿರ ರೂ ಗಳಂತೆ. ಅಪರಿಚಿತ ಕಳ್ಳರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲಿಖಿತ ಎಫ್‌ಐಆರ್ ಕೂಡಾ ದಾಖಲಾಗಿದೆ. ಈ ಹಿಂದೆ ಕಂಪನಿ ತನ್ನದೇ ಮಟ್ಟದಲ್ಲಿ ತನಿಖೆ ನಡೆಸುತ್ತಿದೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ.