ಔರಂಗಾಬಾದ್ (ಮಹಾರಾಷ್ಟ್ರ):ಇದುವರೆಗೆ ಮನೆಯಲ್ಲಿದ್ದ ಬೆಲೆಬಾಳುವ ಸಾಮಗ್ರಿ, ಹಣ, ಚಿನ್ನಾಭರಣ, ವಾಹನ ಕಳ್ಳತನವಾಗಿರುವ ಪ್ರಕರಣಗಳ ಬಗ್ಗೆ ನಾವು ನೀವೆಲ್ಲಾ ಕೇಳಿದ್ದೇವೆ. ಆದರೆ, ಔರಂಗಾಬಾದ್‌ನ ವಾಲಾಜ್ ಪ್ರದೇಶದಲ್ಲಿ ಮೊಬೈಲ್ ಟವರ್ ಕಳ್ಳತನವಾಗಿದೆ. ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರಿಂದ, ದೂರುದಾರ ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಳಿಕ ವಾಲಾಜ್ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಎಂಬ ಕಂಪನಿ ಮೊಬೈಲ್ ಟವರ್‌ಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತದೆ. 2009 ರಲ್ಲಿ ನ್ಯಾಯಾಧೀಶರಾದ ವಾಲಾಜೆಯ ಅರವಿಂದ್ ಕೆ ಸೆಕ್ಟರ್‌ನಲ್ಲಿ ನಿವೇಶನವನ್ನು ಹತ್ತು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿದ್ದರು. ಇದಕ್ಕಾಗಿ ಕಂಪನಿಯು ತಿಂಗಳಿಗೆ 9,500 ರೂ. ನೀಡುತ್ತಿತ್ತು.
2018 ರಲ್ಲಿ ಟವರ್ನನ್ನು ಮುಚ್ಚಲಾಯಿತು. ಆದರೆ, ಕಂಪನಿ ಈ ಬಗ್ಗೆ ಗಮನ ಹರಿಸಿಲ್ಲ, ಬಳಿಕ ಕೆಲವು ದಿನಗಳ ನಂತರ ಅಮರ್ ಲಾಹೋತ್ ಎಂಬುವರು ಸ್ಥಳಕ್ಕೆ ಬಂದಾಗ ಟವರ್ ಕಾಣೆಯಾಗಿತ್ತು. ನಂತರ ಪೊಲೀಸ್ ಠಾಣೆಗೆ ಧಾವಿಸಿ ಟವರ್ ಕಾಣೆಯಾಗಿದೆ ಎಂದು ದೂರಿದ್ದಾರೆ.