ಕರ್ನಾಟಕ

karnataka

ETV Bharat / bharat

ಈ ಗ್ರಾಮದಲ್ಲಿ 18 ಕ್ಕಿಂತ ಕಡಿಮೆ ವಯಸ್ಸಿನವರು ಮೊಬೈಲ್ ಬಳಸುವಂತಿಲ್ಲ - ಅತಿಯಾದ ಫೋನ್​​ ಬಳಕೆಗೆ ಕಡಿವಾಣ

ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯ ಪುಸಾದ್ ತಾಲೂಕಿನ ಬನ್ಸಿ ಗ್ರಾಮದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ನವೆಂಬರ್ 11 ರಂದು ಎಲ್ಲಾ ಗ್ರಾಮಸ್ಥರು ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಫೋನ್​​ ಬಳಕೆ
mobile

By

Published : Nov 18, 2022, 8:44 AM IST

Updated : Dec 1, 2022, 4:06 PM IST

ಮಹಾರಾಷ್ಟ್ರ: ಇಂದಿನ ಮಕ್ಕಳಲ್ಲಿ ಮೊಬೈಲ್​ ಬಳಕೆ ಒಂದು ಚಟವಾಗುತ್ತಿದೆ. ಇದು ದೈಹಿಕ, ಮಾನಸಿಕ, ಭಾವನಾತ್ಮಕ, ಪ್ರಾಯೋಗಿಕ ಮತ್ತು ಅರಿವಿನ ಬೆಳವಣಿಗೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹೀಗಾಗಿ, ಮಹಾರಾಷ್ಟ್ರದ ಯವತ್ಮಾಲ್‌ನ ಪುಟ್ಟ ಹಳ್ಳಿಯೊಂದರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ಅಧಿಕಾರಿಯೊಬ್ಬರು ತಿಳಿಸಿದರು.

ಪುಸಾದ್ ತಾಲೂಕಿನ ಬನ್ಸಿ ಗ್ರಾಮದಲ್ಲಿ ನವೆಂಬರ್ 11 ರಂದು ಗ್ರಾಮಸ್ಥರು ಸೇರಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಕೋವಿಡ್​ 19 ಸಾಂಕ್ರಾಮಿಕದ ಸಮಯದಲ್ಲಿ ಆನ್‌ಲೈನ್ ಶಿಕ್ಷಣಕ್ಕಾಗಿ ಮಕ್ಕಳು ಮೊಬೈಲ್ ಫೋನ್‌ಗಳನ್ನು ಬಳಸಲು ಪ್ರಾರಂಭಿಸಿದ್ದರು. ಈಗ ಮೊಬೈಲ್​ ನೋಡುವುದು ಅತಿಯಾಗಿದೆ. ವಿವಿಧ ವೆಬ್‌ಸೈಟ್‌ಗಳನ್ನು ವೀಕ್ಷಿಸುವುದು ಮತ್ತು ಆನ್‌ಲೈನ್ ಆಟಗಳನ್ನು ಆಡುತ್ತಾ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಶೀಘ್ರದಲ್ಲೇ ಮೊಬೈಲ್​ ವ್ಯಸನಿಗಳಾಗುತ್ತಾರೆ. ಹೀಗಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮದ ಸರಪಂಚ್​ ಗಜಾನನ ಟೆಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಫೋನ್ ಬಳಕೆ​​ ನಿಷೇಧಕ್ಕೆ ಶಿಕ್ಷಣ ಸಚಿವರ ಚಿಂತನೆ

ಇಡೀ ದಿನ ಮೊಬೈಲ್​ ನೋಡುತ್ತಿರುವುದರಿಂದ ಸಮಾಜದೊಂದಿಗೆ ಬೆರೆಯುವ ಮನಸ್ಥಿತಿಯೂ ಮಕ್ಕಳಲ್ಲಿ ಕಡಿಮೆಯಾಗುತ್ತದೆ. ಕ್ರಮೇಣ ಇದು ಒಂಟಿತನಕ್ಕೆ ಕಾರಣವಾಗಿ ಮಾನಸಿಕ ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ, ಮೊಬೈಲ್​ ಅತಿಯಾದ ಬಳಕೆಯನ್ನು ತಪ್ಪಿಸಲು ಈ ಕ್ರಮ ಸೂಕ್ತ. ಆರಂಭದಲ್ಲಿ ಸಮಸ್ಯೆ ಉಂಟಾಗಬಹುದು. ಈ ಕುರಿತು ಪೋಷಕರು ಮತ್ತು ಮಕ್ಕಳಿಬ್ಬರಿಗೂ ಸಲಹೆ ನೀಡಲಾಗುವುದು. ಕೌನ್ಸೆಲಿಂಗ್ ಮಾಡಿದ ನಂತರವೂ ಮಕ್ಕಳು ಮೊಬೈಲ್ ಬಳಸುವುದು ಕಂಡುಬಂದರೆ ನಾವು ದಂಡ ವಿಧಿಸುತ್ತೇವೆ. ಮಕ್ಕಳು ಮತ್ತೆ ಅಧ್ಯಯನಕ್ಕೆ ಹೋಗುವಂತೆ ಮಾಡುವುದು ಹಾಗೂ ಮೊಬೈಲ್ ಫೋನ್‌ಗಳಿಗೆ ಅಂಟಿಕೊಂಡು ವಿಚಲಿತರಾಗದಂತೆ ಮಾಡುವುದು ಇದರ ಉದ್ದೇಶ ಎಂದು ಹೇಳಿದರು.

ಇದನ್ನೂ ಓದಿ:ಅಕ್ಕನ ಮೊಬೈಲ್​ ಗೀಳು ಕಂಡು ಪಾಸ್​ವರ್ಡ್​ ಇಟ್ಟ ತಮ್ಮ: ದೊಡ್ಡಬಳ್ಳಾಪುರದಲ್ಲಿ ನೇಣಿಗೆ ಶರಣಾದ ಯುವತಿ

ಈ ವರ್ಷದ ಸ್ವಾತಂತ್ರ್ಯ ದಿನದಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೋಹಿತ್ಯಂಚೆ ವಡ್ಗಾಂವ್ ಗ್ರಾಮದಲ್ಲಿಯೂ ಸಹ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿತ್ತು. ಮೊಬೈಲ್ ಫೋನ್ ಚಟವನ್ನು ನಿಭಾಯಿಸಲು "ಸಂಜೆ ಡೆಟಾಕ್ಸ್" (evening detox) ಎಂಬ ನಿಯಮ ಜಾರಿ ಮಾಡಲಾಗಿದೆ. ಈ ಪ್ರಕಾರ, ಮಕ್ಕಳು ಮತ್ತು ವಯಸ್ಕರು ಸಂಜೆ 7 ರಿಂದ 8:30 ರವರೆಗೆ ಫೋನ್ ಬಳಸುವುದನ್ನು ನಿರ್ಬಂಧಿಸಲಾಗಿದೆ.

Last Updated : Dec 1, 2022, 4:06 PM IST

ABOUT THE AUTHOR

...view details