ಶ್ರೀನಗರ (ಜಮ್ಮು-ಕಾಶ್ಮೀರ): ಕಣಿವೆ ರಾಜ್ಯ ಸೇರಿದಂತೆ ದೇಶದಲ್ಲೆಡೆ 72ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಯಾವುದೇ ಅಹಿತಕರ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದಕ್ಕೂ ಮುನ್ನ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಗಂಡರ್‌ಬಲ್ ಮತ್ತು ಉದಾಂಪುರ ಹೊರತುಪಡಿಸಿ ಕಣಿವೆ ರಾಜ್ಯದಲ್ಲಿ ಅತಿ ವೇಗದ ಮೊಬೈಲ್ ಡೇಟಾ ಸೇವೆಗಳ ಮೇಲಿದ್ದ ನಿಷೇಧವನ್ನು ಫೆಬ್ರವರಿ 6 ರವರೆಗೆ ವಿಸ್ತರಿಸಿದೆ. ಜನವರಿ 22 ರಿಂದ ಜಮ್ಮು - ಕಾಶ್ಮೀರದ ಇತರ ರಾಜ್ಯಗಳಲ್ಲಿ 2ಜಿ ಸ್ಪೀಡ್ ಮೊಬೈಲ್ ನೆಟ್ವರ್ಕ್ ಬಳಕೆಗೆ ಮಾತ್ರ ಅವಕಾಶ ನೀಡಿ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ದೇಶ ವಿರೋಧಿ ಹಾಗೂ ಪ್ರಜಗಳಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿತ್ತು.