ಅಹ್ಮದಾಬಾದ್(ಗುಜರಾತ್) :ಗುಜರಾತ್ನಲ್ಲಿ ಗುಂಪು ದಾಳಿ, ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಅಹ್ಮದಾಬಾದ್ನಲ್ಲಿ ಇತ್ತೀಚೆಗೆ ನಡೆದಿದೆ.
6 ಜನರಿದ್ದ ಗುಂಪೊಂದು(Mob lynching)ಅನ್ಯಕೋಮಿನ ಇಬ್ಬರು ಯುವಕರನ್ನು ನಿಂದಿಸಿದ್ದಲ್ಲದೇ, ಅವರ ಮೇಲೆ ಚಾಕುವಿನಿಂದ ದಾಳಿ(attacked with knives in Ahmedabad) ಮಾಡಿದ್ದಾರೆ.
ಘಟನೆಯಲ್ಲಿ ಓರ್ವ ಯುವಕ ಗಂಭೀರವಾಗಿ ಗಾಯಗೊಂಡರೆ, ಇನ್ನೊಬ್ಬನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಲ್ಲಿನ ಸಿಯೋಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.
ಅಹ್ಮದಾಬಾದ್ನ ಉಸ್ಮಾನ್ಪುರ ಉದ್ಯಾನದ ಮುಂದೆ ಇಬ್ಬರು ಯುವಕರು ಕುಳಿತಾಗ, ಅದೇ ಸ್ಥಳಕ್ಕೆ ಬಂದ 6 ಜನರ ಗುಂಪು ಇವರ ಹೆಸರನ್ನು ಕೇಳಿದ್ದಾರೆ. ಬಳಿಕ ನಿಂದಿಸಲು ಪ್ರಾರಂಭಿಸಿದ್ದಾರೆ.
ಇದನ್ನು ವಿರೋಧಿಸಿದ ಯುವಕರ ಮೇಲೆ ಗುಂಪು ದಾಳಿ ಮಾಡಿ ಇಬ್ಬರನ್ನೂ ಚಾಕುವಿನಿಂದ ಇರಿದಿದ್ದಾರೆ. ಇದರಲ್ಲಿ ನೌಶಾದ್ ಎಂಬುವ ಗಂಭೀರವಾಗಿ ಗಾಯಗೊಂಡರೆ, ರೋಹನ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗುಂಪು ದಾಳಿಕೋರರಿಂದ ತಪ್ಪಿಸಿಕೊಳ್ಳಲು ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ನೌಶಾದ್ನನ್ನು ಸ್ಥಳೀಯರು ಕಂಡು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಮಧ್ಯೆ ಘಟನೆಯನ್ನು ಖಂಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಸಂತ್ರಸ್ತ ಯುವಕರಿಗೆ ನ್ಯಾಯ ಒದಗಿಸಲು ಹೋರಾಡುವುದಾಗಿ ತಿಳಿಸಿದ್ದಾರೆ.