ಕರ್ನಾಟಕ

karnataka

ETV Bharat / bharat

'ಖುಷಿಯಿಂದ ಲಂಚ ಕೊಟ್ಟರೆ ಸ್ವೀಕರಿಸಿ..': ಬಿಎಸ್​ಪಿ ಶಾಸಕಿಯ ವಿವಾದಿತ ಹೇಳಿಕೆ - ಶಾಸಕಿ ರಾಮಬಾಯಿ ಸಿಂಗ್​

ಸ್ವಯಂಪ್ರೇರಣೆಯಿಂದ ಲಂಚ ನೀಡಿದರೆ ಸ್ವೀಕಾರ ಮಾಡಿ ಎಂದು ಹೇಳುವ ಮೂಲಕ ಬಿಎಸ್​ಪಿ ಶಾಸಕಿಯೊಬ್ಬರು ವಿವಾದಿತ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.

MLA Rambai Parihar
MLA Rambai Parihar

By

Published : Sep 29, 2021, 7:05 PM IST

Updated : Sep 29, 2021, 7:15 PM IST

ಭೋಪಾಲ್​(ಮಧ್ಯಪ್ರದೇಶ): ಖುಷಿಯಿಂದ ಅಥವಾ ಸ್ವಯಂಪ್ರೇರಣೆಯಿಂದ ಲಂಚ ನೀಡಿದರೆ ಸ್ವೀಕರಿಸಿ ಎಂದು ಹೇಳುವ ಮೂಲಕ ಬಿಎಸ್​​ಪಿ ಶಾಸಕಿ ರಾಮಬಾಯಿ ಸಿಂಗ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರ ದಾಮೋಹ್​ದ ಪಠಾರಿಯಾದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಇತರೆ ಸಿಬ್ಬಂದಿ ಜೊತೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಲಂಚ ಪಡೆದುಕೊಳ್ಳುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದು, ಪ್ರತಿಯೊಬ್ಬರೂ ಅಧಿಕಾರಿಗಳಿಗೆ 5 ರಿಂದ 9 ಸಾವಿರ ರೂ. ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ಈ ವೇಳೆ ಮಾತನಾಡಿರುವ ಶಾಸಕಿ, ಅಧಿಕಾರಿಗಳನ್ನು ಉದ್ದೇಶಿಸಿ ನೀವು 500 ಅಥವಾ 100 ರೂ ಲಂಚ ಪಡೆದುಕೊಳ್ಳಬಹುದು. ಅದು ಹಿಟ್ಟಿನಲ್ಲಿ ಉಪ್ಪಿನಂತೆ ಕೆಲಸ ಮಾಡುತ್ತದೆ. ಆದರೆ ಇಷ್ಟೊಂದು ಹಣ ಲಂಚ ಪಡೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಗುವನ್ನು ಅಡುಗೆ ಪಾತ್ರೆಯಲ್ಲಿಟ್ಟು ಸುರಕ್ಷಿತವಾಗಿ ಕರೆತಂದು ಪೋಲಿಯೋ ಲಸಿಕೆ ಹಾಕಿಸಿದ ವ್ಯಕ್ತಿ

ಪಂಚಾಯತ್​ ಕಾರ್ಯದರ್ಶಿ ಮತ್ತು ರೋಜಗಾರ್ ಸಹಾಯಕ್​ ಅತಿ ಕಡಿಮೆ ಸಂಬಳ ಪಡೆದುಕೊಳ್ಳುತ್ತಾರೆ. ದೂರದ ಹಳ್ಳಿಗಳಿಗೆ ಹೋದಾಗ ಯಾರಾದರೂ ಸ್ವಯಂಪ್ರೇರಣೆಯಿಂದ ಲಂಚ ನೀಡಿದರೆ ಪಡೆದುಕೊಳ್ಳಬಹುದು ಎಂದಿದ್ದಾರೆ. ಆದರೆ 9-10 ಸಾವಿರ ಹಣ ನೀಡುವಂತೆ ಒತ್ತಾಯ ಮಾಡಬಾರದು ಎಂದು ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ. ವೈರಲ್​ ವಿಡಿಯೋ ಆಧರಿಸಿ ಸಿಇಒಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಚೈತನ್ಯ ತಿಳಿಸಿದ್ದಾರೆ.

Last Updated : Sep 29, 2021, 7:15 PM IST

ABOUT THE AUTHOR

...view details