ಲಖನೌ(ಉತ್ತರಪ್ರದೇಶ):ಉತ್ತರಪ್ರದೇಶದಲ್ಲಿ ಚುನಾವಣೆ ಘೋಷಣೆಯಾದ ಬಳಿಕ ಆಡಳಿತಾರೂಢ ಬಿಜೆಪಿಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ. ಕಳೆದ ಮೂರು ದಿನದಲ್ಲಿ ಇಬ್ಬರು ಸಚಿವರು ಮತ್ತು ಐವರು ಶಾಸಕರು ಬಿಜೆಪಿ ತೊರೆದಿದ್ದಾರೆ. ಇದು ಪಕ್ಷಕ್ಕೆ ಚುನಾವಣೆ ಹೊತ್ತಲ್ಲಿ ಭಾರಿ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಲಾಗ್ತಿದೆ.
ಒಬಿಸಿ ಸಮುದಾಯದ ಪ್ರಭಾವಿಗಳಾದ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಮತ್ತು ಬಿಜೆಪಿಗೆ ಶಾಕ್ ನೀಡಿದ್ದರು. ಇದೀಗ ಅವರನ್ನೇ ಹಿಂಬಾಲಿಸಿರುವ ಮತ್ತೊಬ್ಬ ಶಾಸಕ ಫಿರೋಜಾಬಾದ್ ಜಿಲ್ಲೆಯ ಶೀಕೋಹಾಬಾದ್ ಕ್ಷೇತ್ರದ ಎಂಎಲ್ಎ ಮುಕೇಶ್ ವರ್ಮಾ ಪಕ್ಷಕ್ಕೆ ಗುಡ್ಬೈ ಹೇಳಿದ್ದಾರೆ.