ಗೋವಾ/ಮಣಿಪುರ: ಗೋವಾ ಹಂಗಾಮಿ ಸ್ಪೀಕರ್ಗಳಾಗಿ ಶಾಸಕ ಗಣೇಶ್ ಗಾಂವ್ಕರ್ ಮತ್ತು ಮಣಿಪುರದಲ್ಲಿ ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ ಅವರು ಶಾಸಕ ಗಣೇಶ್ ಗಾಂವ್ಕರ್ ಅವರು ರಾಜಭವನದಲ್ಲಿ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಬೋಧಿಸಿದರು. ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಮಾರ್ಚ್ 15 ರಂದು ರಾಜ್ಯ ವಿಧಾನ ಸಭೆಯ ಅಧಿವೇಶನದಲ್ಲಿ ನಡೆಯಲಿದೆ.
ಗೋವಾ ವಿಧಾನಸಭೆ ಹಂಗಾಮಿ ಸ್ಪೀಕರ್ ಆಗಿ ಗಾಂವ್ಕರ್ ಪ್ರಮಾಣ: ಮಣಿಪುರದ ನೂತನ ಶಾಸಕರ ಪದಗ್ರಹಣ - ಪ್ರಮಾಣ ವಚನ ಸ್ವೀಕರಿಸಿದ ಮಣಿಪುರ ನೂತನ ಶಾಸಕರು
ಗೋವಾದಲ್ಲಿ ಹಂಗಾಮಿ ಸ್ಪೀಕರ್ ಗಾಂವ್ಕರ್ ಮತ್ತು ಮಣಿಪುರದ ನೂತನ ಶಾಸಕರು ಪ್ರಮಾಣ ವಚಣ ಸ್ವೀಕರಿಸಿದರು.
ಮಾಣವಚನ ಸ್ವೀಕರಿಸಿದ ಗೋವಾದ ಹಂಗಾಮಿ ಸ್ಪೀಕರ್ ಗಾಂವ್ಕರ್, ಮಣಿಪುರದ ನೂತನ ಶಾಸಕರು
ಓದಿ:ನಿರ್ಗತಿಕ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಾರ್ಡನ್!
ಇನ್ನು ಮಣಿಪುರದಲ್ಲಿ ಹೊಸದಾಗಿ ಚುನಾಯಿತ ಶಾಸಕರು ವಿಧಾನಸಭೆಯ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದ ಹಿರಿಯ ಬಿಜೆಪಿ ಶಾಸಕ ಸೊರೊಖೈಬಾಂ ರಾಜೇನ್ ಸಿಂಗ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.