ಕರ್ನಾಟಕ

karnataka

ETV Bharat / bharat

ಜಾರ್ಖಂಡ್‌ ಬಳಿಕ ಯುಪಿ ಸರದಿ ; ಉತ್ತರಪ್ರದೇಶ ಅಸೆಂಬ್ಲಿಯಲ್ಲೂ ನಮಾಜ್‌ಗೆ ಕೊಠಡಿ ಬೇಕೆಂದ ಶಾಸಕ - ವಿಧಾನಸಭೆ ಕಟ್ಟಡ

ಜಾರ್ಖಂಡ್‌ನ ವಿಧಾನಸಭೆಯಲ್ಲಿ ನಮಾಜ್‌ಗಾಗಿ ಅಲ್ಲಿನ ಸ್ಪೀಕರ್‌ ಕೊಠಡಿ ನೀಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಪ್ರತಿಭಟಿಸಿದೆ. ಜಾರ್ಖಂಡ್‌ ಮುಕ್ತಿ ಮೋರ್ಚಾ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ಜಾರ್ಖಂಡ್‌ ಸ್ಪೀಕರ್‌ ಅವರ ನಿರ್ಧಾರ ಸ್ವಾಗತಿಸಿತ್ತು..

MLA demands 'namaz room' in UP Assembly building as in Jharkhand
ಜಾರ್ಖಂಡ್‌ ಬಳಿಕ ಯುಪಿ ಸರದಿ; ಉತ್ತರ ಪ್ರದೇಶ ಅಸೆಂಬ್ಲಿಯಲ್ಲೂ ನಮಾಜ್‌ಗೆ ಕೊಠಡಿ ಬೇಕೆಂದ ಶಾಸಕ

By

Published : Sep 7, 2021, 9:28 PM IST

ಲಖನೌ :ಜಾರ್ಖಂಡ್‌ ವಿಧಾನಸಭೆ ಕಟ್ಟಡದಲ್ಲಿ ನಮಾಜ್‌ ಮಾಡಲು ಒಂದು ಕೊಠಡಿ ನೀಡಿದ ಬೆನ್ನಲ್ಲೇ ಇದೀಗ ಇಂತಹದ್ದೇ ಬೇಡಿಕೆ ಉತ್ತರಪ್ರದೇಶದಲ್ಲಿ ಕೇಳಿ ಬಂದಿದೆ. ಯುಪಿ ವಿಧಾನಸಭೆಯ ಕಟ್ಟಡದಲ್ಲಿ ನಮಾಜ್‌ ಮಾಡಲು ಕೊಠಡಿ ನೀಡಬೇಕು ಎಂದು ಶಾಸಕ ಇರ್ಫಾನ್‌ ಸೋಲಂಕಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸ್ಪೀಕರ್‌ ಗಮನ ಹರಿಸಬೇಕು ಎಂದಿರುವ ಸೋಲಂಕಿ, ಕಳೆದ 15 ವರ್ಷಗಳಿಂದ ಶಾಸಕನಾಗಿದ್ದೇನೆ. ಹಲವು ಬಾರಿ ಅಧಿವೇಶನ ನಡೆಯುತ್ತಿರಬೇಕಾದರೆ ಮುಸ್ಲಿಂ ಶಾಸಕರು ನಮಾಜ್‌ಗಾಗಿ ಕಲಾಪದಿಂದ ಹೊರ ನಡೆದಿದ್ದಾರೆ. ವಿಧಾನಸಭೆ ಕಟ್ಟಡದೊಳಗೆ ಒಂದು ಸಣ್ಣ ಕೊಠಡಿಯನ್ನು ನಮಾಜ್‌ಗೆ ನೀಡಿದರೆ ಕಲಾಪದ ವೇಳೆ ಹೊರಗಡೆ ಹೋಗುವುದಿಲ್ಲ ಎಂದಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೂ ಪ್ರಾರ್ಥನೆ ಮಾಡಲು ಕೊಠಡಿಗಳು ಇವೆ. ಹೀಗಾಗಿ, ವಿಧಾನಸಭೆ ಸಭಾಧ್ಯಕ್ಷರು ಈ ವಿಚಾರಗಳನ್ನು ಪರಿಗಣಿಸಬೇಕು. ಇದರಿಂದ ಯಾರಿಗೂ ನಷ್ಟವಾಗುವುದಿಲ್ಲ ಎಂದು ಸೋಲಂಕಿ ಹೇಳಿದ್ದಾರೆ. ಆದರೆ, ಶಾಸಕ ಇರ್ಫಾನ್‌ ಈ ಬಗ್ಗೆ ಯಾವುದೇ ರೀತಿಯ ಮನವಿ ಪತ್ರ ಸ್ಪೀಕರ್‌ಗೆ ನೀಡಿಲ್ಲ.

ಜಾರ್ಖಂಡ್‌ನ ವಿಧಾನಸಭೆಯಲ್ಲಿ ನಮಾಜ್‌ಗಾಗಿ ಅಲ್ಲಿನ ಸ್ಪೀಕರ್‌ ಕೊಠಡಿ ನೀಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಪ್ರತಿಭಟಿಸಿದೆ. ಜಾರ್ಖಂಡ್‌ ಮುಕ್ತಿ ಮೋರ್ಚಾ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರ ಜಾರ್ಖಂಡ್‌ ಸ್ಪೀಕರ್‌ ಅವರ ನಿರ್ಧಾರ ಸ್ವಾಗತಿಸಿತ್ತು.

ಸ್ಪೀಕರ್ ಆದೇಶಕ್ಕೆ ಸೆಪ್ಟೆಂಬರ್ 2ರಂದು ಜಾರ್ಖಂಡ್ ವಿಧಾನಸಭೆಯ ಉಪ ಕಾರ್ಯದರ್ಶಿ ನವೀನ್‌ಕುಮಾರ್ ಸಹಿ ಮಾಡಿದ್ದಾರೆ. ವಿಧಾನಸಭೆಯ ಕಟ್ಟಡದಲ್ಲಿ ನಮಾಜ್ ಮಾಡಲು ಕೊಠಡಿ ಸಂಖ್ಯೆ ಟಿಡಬ್ಲ್ಯೂ 348 ಅನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹನುಮ ಶ್ಲೋಕ ಪಠಣಕ್ಕೆ ಅವಕಾಶ ಕೊಡಿ :ಜಾರ್ಖಂಡ್‌ ವಿಧಾನಸಭೆ ಕಟ್ಟಡದಲ್ಲಿ ನಮಾಜ್‌ಗೆ ಕೊಠಡಿ ನೀಡಿದ ಬೆನ್ನಲ್ಲೇ ಇದೀಗ ಬಿಹಾರ ವಿಧಾನಸಭೆಯಲ್ಲಿ ಹನುಮ ಶ್ಲೋಕ ಪಠಣಕ್ಕೆ ಅವಕಾಶ ನೀಡಿ ಎಂದು ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್‌ ಠಾಕೂರ್‌ ಒತ್ತಾಯಿಸಿದ್ದಾರೆ. ಜಾತ್ಯಾತೀತ ರಾಷ್ಟ್ರದಲ್ಲಿ ಮುಸ್ಲಿಂ ಶಾಸಕರಿಗೆ ವಿಧಾನಸಭೆಯಲ್ಲಿ ನಮಾಜ್‌ ಮಾಡಲು ಕೊಠಡಿ ನೀಡಿದರೆ ನಮಗೆ ಹನುಮ ಶ್ಲೋಕ ಪಠಣಕ್ಕೆ ಯಾಕೆ ಅವಕಾಶ ನೀಡಬಾರದು ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details