ಹಲ್ದ್ವಾನಿ (ಉತ್ತರಾಖಂಡ) : ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಕಾಲಾಧುಂಗಿ ಶಾಸಕ ಬಂಶೀಧರ್ ಭಗತ್ ಮತ್ತೆ ತಮ್ಮ ನಾಲಿಗೆ ಹರಿಯಬಿಟ್ಟಿದ್ದಾರೆ . ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸಚಿವ ಈ ಬಾರಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮುಂದೆ ಹಿಂದೂ ದೇವತೆಗಳಿಗೆ ಅಪಮಾನ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ವೇದಿಕೆಯಲ್ಲಿ ಮಾತನಾಡುವಾಗ, ಮಹಿಳೆಯರು ಯಾವಾಗಲೂ ಗೌರವಿಸಲ್ಪಡಬೇಕು. ಜೊತೆಗೆ ಪುರುಷರು ಕೂಡ ಗೌರವಿಸಲ್ಪಡಬೇಕು. ಜ್ಞಾನವನ್ನು ಪಡೆಯಲು ಸರಸ್ವತಿಯನ್ನು ಪಟಾಯಿಸಿ, ಶಕ್ತಿ ಬೇಕಾದರೆ ದುರ್ಗೆಯನ್ನು ಪಟಾಯಿಸಿ, ಹಣ ಬೇಕಾದರೆ ಲಕ್ಷ್ಮೀ ಯನ್ನು ಪಟಾಯಿಸಿ ಎಂದು ವೇದಿಕೆಯಲ್ಲಿ ಹೇಳಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಇವರ ಹೇಳಿಕೆಯಿಂದ ದಿಗ್ಭ್ರಮೆಗೊಂಡಿದ್ದಾರೆ.