ಕರ್ನಾಟಕ

karnataka

By

Published : Mar 8, 2023, 4:25 PM IST

ETV Bharat / bharat

ಶಾಸಕ ಬಚ್ಚು ಕಡೂಗೆ ಎರಡು ವರ್ಷ ಶಿಕ್ಷೆ ವಿಧಿಸಿದ ನಾಸಿಕ್ ಸೆಷನ್ಸ್ ಕೋರ್ಟ್..!

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲಪುರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಶಾಸಕ ಬಚ್ಚು ಕಡೂಗೆ ನಾಸಿಕ್ ಜಿಲ್ಲಾ ಸೆಷನ್ಸ್ ಕೋರ್ಟ್​ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

MLA Bachu Kadu
ಶಾಸಕ ಬಾಚು ಕಾಡುಗೆ ಎರಡು ವರ್ಷ ಶಿಕ್ಷೆ ವಿಧಿಸಿದ ನಾಸಿಕ್ ಸೆಷನ್ಸ್ ಕೋರ್ಟ್..!

ಶಾಸಕ ಬಾಚು ಕಾಡುಗೆ ಎರಡು ವರ್ಷ ಶಿಕ್ಷೆ ವಿಧಿಸಿದ ನಾಸಿಕ್ ಸೆಷನ್ಸ್ ಕೋರ್ಟ್

ನಾಸಿಕ್ (ಮಹಾರಾಷ್ಟ್ರ):ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲಪುರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಶಾಸಕ ಬಚ್ಚು ಕಡೂ ಅವರಿಗೆ ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ಹಾಗೂ ಸರ್ಕಾರಿ ಅಧಿಕಾರಿಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಒಟ್ಟು ಎರಡು ವರ್ಷ ಶಿಕ್ಷೆ ವಿಧಿಸಲಾಗಿದೆ. 2017ರಲ್ಲಿ ಅಂಗವಿಕಲರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಚ್ಚು ಕಡೂ ಅವರು ನಾಸಿಕ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆ ವೇಳೆ ಬಾಚು ಕಾಡು, ಅಂದಿನ ನಗರಸಭೆ ಆಯುಕ್ತ ಅಭಿಷೇಕ್ ಕೃಷ್ಣ ಅವರನ್ನು ನಿಂದಿಸಿ, ಅವರ ಮೇಲೆ ಕೈ ಮಾಡಿದ್ದರು. ಈ ಸಂಬಂಧ ಸರ್ಕಾರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯವು ಬುಧವಾರ ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​ ಶಿಕ್ಷೆಯನ್ನು ಪ್ರಕಟಿಸಿದೆ.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ನ್ಯಾಯಾಲಯ ನನಗೆ ಎರಡು ವರ್ಷ ಶಿಕ್ಷೆ ವಿಧಿಸಿದೆ. ಆದರೆ, ಅದರ ಬಗ್ಗೆ ನನಗೆ ಬೇಸರವಿಲ್ಲ. ಏಕೆಂದರೆ ಅಂಗವಿಕಲರ ಸಮಸ್ಯೆಗಳ ಪರಿಹಾರಕ್ಕಾಗಿ ನಾಸಿಕ್‌ ಬಂದು ಪ್ರತಿಭಟಿಸಿದ್ದೆ. ಅದರ ನಂತರ, ರಾಜ್ಯದಲ್ಲಿ ವಿಶೇಷಚೇತನರಿಗಾಗಿ ಸಚಿವಾಲಯವನ್ನು ಸ್ಥಾಪಿಸಲಾಯಿತು. ಆಗ ಈ ಬಗ್ಗೆ ನನಗೆ ಸಂತೋಷವಾಗಿತ್ತು. ಆದರೆ, ಮತ್ತೊಂದೆಡೆ ವಿಕಲಚೇತನರ ಹಣ ಬಳಕೆ ಮಾಡದ ಅಧಿಕಾರಿಗಳು ಬಡ್ತಿ ಪಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ನಾನು ಹೈಕೋರ್ಟ್​ ಮೊರೆ ಹೋಗುತ್ತೇನೆ ಎಂದು ಶಾಸಕ ಬಚ್ಚು ಕಡೂಗೆ ಪ್ರತಿಕ್ರಿಯೆ ನೀಡಿದರು.

ಏನಿದು ಪ್ರಕರಣ?:2017ರಲ್ಲಿ ಪ್ರಹಾರ್ ಅಸೋಸಿಯೇಷನ್ ವತಿಯಿಂದ, ನಾಸಿಕ್ ಮುನ್ಸಿಪಲ್ ಕಾರ್ಪೊರೇಷನ್ ದಿವ್ಯಾಂಗ ಕಲ್ಯಾಣ ನಿಧಿಯನ್ನು ಖರ್ಚು ಮಾಡದೇ ಇರುವ ಕಾರಣ ನಾಶಿಕ್ ಮುನ್ಸಿಪಲ್ ಕಾರ್ಪೊರೇಶನ್ ವಿರುದ್ಧ ಪ್ರತಿಭಟನೆ ನಡೆಸಲಾಗತ್ತು. ಈ ಸಂದರ್ಭದಲ್ಲಿ ಶಾಸಕ ಕಡೂ ನೇತೃತ್ವದ ನಿಯೋಗ ಅಂದಿನ ಪೌರಾಯುಕ್ತ ಅಭಿಷೇಕ್ ಕೃಷ್ಣ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಬಾಚು ಕಾಡು ಕಮಿಷನರ್ ಅಭಿಷೇಕ್ ಕೃಷ್ಣ ಅವರ ಮೇಲೆ ಕೈ ಮಾಡಿದ್ದಾರೆ.

ಅಲ್ಲದೆ, ಆಯುಕ್ತರನ್ನು ಅವಾಚ್ಚ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ, ಪೊಲೀಸ್ ಸಿಬ್ಬಂದಿ ಮಧ್ಯೆ ಪ್ರವೇಶಿಸಿ, ವಿವಾದ ಬಗೆಹರಿಸಿದರು. ಈ ಸಂಬಂಧ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಬಚ್ಚು ಕಡೂ ವಿರುದ್ಧ ಸರ್ಕಾರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್​​​​​ಎ ಅವರಿಗೆ ನಾಸಿಕ್ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದಕ್ಕೂ ಮುನ್ನ, 2014ರಲ್ಲಿ ಶಾಸಕ ಕಡೂ ಅವರನ್ನು ಅಮರಾವತಿ ಜಿಲ್ಲೆಯ ಚಂದೂರ್ಬಜಾರ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಆ ನ್ಯಾಯಾಲಯವು ಅವರಿಗೆ ಎರಡು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿತ್ತು.

ಇದನ್ನೂ ಓದಿ:ಮಕ್ಕಳೆದುರಲ್ಲೇ ಹೆಂಡತಿಗೆ ಬೆಂಕಿ ಹಚ್ಚಿದ ಪಾಪಿ ಪತಿ.. ನರಳಿ ನರಳಿ ಪ್ರಾಣ ಬಿಟ್ಟ ಪತ್ನಿ

ABOUT THE AUTHOR

...view details