ಚೆನ್ನೈ:ತಮಿಳುನಾಡಿನಲ್ಲಿ 130 ರಾಜಕೀಯ ನಾಯಕರ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಗಳನ್ನು ರದ್ದುಗೊಳಿಸಲು ಸಿಎಂ ಸ್ಟಾಲಿನ್ ಆದೇಶಿಸಿದ್ದಾರೆ.
ರಾಜಕೀಯ ಮುಖಂಡರ ವಿರುದ್ಧದ ಮಾನಹಾನಿ ಪ್ರಕರಣ ರದ್ದುಗೊಳಿಸಿದ ಸಿಎಂ ಸ್ಟಾಲಿನ್ - cases filed against political leaders
ಡಿಎಂಡಿಕೆ ಮುಖಂಡ ವಿಜಯಕಾಂತ್, ಅವರ ಪತ್ನಿ ಪ್ರೇಮಲತಾ ವಿಜಯಕಾಂತ್, ಕಾಂಗ್ರೆಸ್ ಇವಿಕೆಎಸ್ ಎಲಂಗೋವನ್, ವಿಜಯಥರಣಿ, ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಮಾಜಿ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣನ್, ಕೆ.ಎನ್ ನೆಹರು, ಎಸ್. ಎಂ ನಾಸರ್, ಸಂಸದೆ ಕನಿಮೊಳಿ, ಡಿಎಂಕೆ ಸಂಸದ ಧಯಾನಿಧಿ ಮಾರನ್ ಮೇಲೆ ಇದ್ದ ಹಲವಾರು ಪ್ರಕರಣಗಳು ಈ ಮೂಲಕ ರದ್ದಾಗಲಿವೆ.
![ರಾಜಕೀಯ ಮುಖಂಡರ ವಿರುದ್ಧದ ಮಾನಹಾನಿ ಪ್ರಕರಣ ರದ್ದುಗೊಳಿಸಿದ ಸಿಎಂ ಸ್ಟಾಲಿನ್ ರಾಜಕೀಯ ಮುಖಂಡರ ವಿರುದ್ಧ ದಾಖಲಾದ ಮಾನಹಾನಿ ಪ್ರಕರಣ ರದ್ದುಗೊಳಿಸಿ ತಮಿಳುನಾಡು ಸಿಎಂ](https://etvbharatimages.akamaized.net/etvbharat/prod-images/768-512-12625256-382-12625256-1627659992434.jpg)
ಇತ್ತೀಚೆಗೆ ಜಲ್ಲಿಕಟ್ಟು ಪ್ರತಿಭಟನೆ ಮತ್ತು ಸ್ಟರ್ಲೈಟ್ ಪ್ರತಿಭಟನೆಯ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನ್ನು ತಮಿಳುನಾಡು ಸರ್ಕಾರ ರದ್ದುಗೊಳಿಸಿದೆ. ಪ್ರಸ್ತುತ ಮುಖ್ಯಮಂತ್ರಿ ಸ್ಟಾಲಿನ್ ಅವರು 2012 ರಿಂದ ಜುಲೈ2021ರವರೆಗಿನ 130 ರಾಜಕೀಯ ನಾಯಕರ ಮೇಲೆ ದಾಖಲಾದ ಎಲ್ಲಾ ಮಾನಹಾನಿ ಪ್ರಕರಣಗಳನ್ನು ರದ್ದುಗೊಳಿಸುವಂತೆ ಆದೇಶಿಸಿದ್ದಾರೆ.
ಡಿಎಂಡಿಕೆ ಮುಖಂಡ ವಿಜಯಕಾಂತ್, ಅವರ ಪತ್ನಿ ಪ್ರೇಮಲತಾ ವಿಜಯಕಾಂತ್, ಕಾಂಗ್ರೆಸ್ ಇವಿಕೆಎಸ್ ಎಲಂಗೋವನ್, ವಿಜಯಥರಣಿ, ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಮಾಜಿ ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣನ್, ಕೆ ಎನ್ ನೆಹರು, ಎಸ್ ಎಂ ನಾಸರ್, ಸಂಸದೆ ಕನಿಮೊಳಿ, ಡಿಎಂಕೆ ಸಂಸದ ಧಯಾನಿಧಿ ಮಾರನ್ ಮೇಲೆ ಇದ್ದ ಹಲವಾರು ಪ್ರಕರಣಗಳು ಈ ಮೂಲಕ ರದ್ದಾಗಲಿವೆ.