ಕರ್ನಾಟಕ

karnataka

ETV Bharat / bharat

11,35,600 ರೂ. ಮೌಲ್ಯದ ನಕಲಿ ಭಾರತೀಯ ನೋಟುಗಳೊಂದಿಗೆ ಮಹಿಳೆ ಬಂಧನ - Aizawl Border Security Force

ಸ್ಪೆಷಲ್​ ನಾರ್ಕೋಟಿಕ್ಸ್ ಪೊಲೀಸರ ಪ್ರಕಾರ ಮಹಿಳೆಯ ಬಳಿ 500, 200 ಮತ್ತು 100 ರೂಪಾಯಿ ಮುಖಬೆಲೆಯುಳ್ಳ ನೋಟುಗಳಿದ್ದವು. ಅವಳಲ್ಲಿ ಒಟ್ಟು 11,35,600 ರೂಪಾಯಿಗಳಿತ್ತು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ..

Fake currency conquered by woman
ಮಹಿಳೆಯಿಂದ ವಶಪಡಿಸಿಕೊಂಡ ನಕಲಿ ನೋಟುಗಳು

By

Published : Mar 27, 2022, 12:41 PM IST

ಮಿಜೋರಾಂ :11,35,600 ರೂಪಾಯಿಗಳ ನಕಲಿ ಭಾರತೀಯ ಕರೆನ್ಸಿ ನೋಟುಗಳೊಂದಿಗೆ (ಎಫ್‌ಐಸಿಎನ್) ಮಹಿಳೆಯನ್ನು ಐಜ್ವಾಲ್‌ನಲ್ಲಿ ಪೊಲೀಸರು ಮತ್ತು ಭದ್ರತಾ ಪಡೆ ಬಂಧಿಸಿದ್ದಾರೆ. ಐಜ್ವಾಲ್ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಸ್ಪೆಷಲ್​ ನಾರ್ಕೋಟಿಕ್ಸ್ ಪೊಲೀಸರೊಂದಿಗೆ ಸೇರಿ ಶನಿವಾರ ಮಹಿಳೆಯನ್ನು ಬಂಧಿಸಿದ್ದಾರೆ.

ಸ್ಪೆಷಲ್​ ನಾರ್ಕೋಟಿಕ್ಸ್ ಪೊಲೀಸರ ಪ್ರಕಾರ ಮಹಿಳೆಯ ಬಳಿ 500, 200 ಮತ್ತು 100 ರೂಪಾಯಿ ಮುಖಬೆಲೆಯುಳ್ಳ ನೋಟುಗಳಿದ್ದವು. ಅವಳಲ್ಲಿ ಒಟ್ಟು 11,35,600 ರೂಪಾಯಿಗಳಿತ್ತು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ABOUT THE AUTHOR

...view details