ಕರ್ನಾಟಕ

karnataka

ETV Bharat / bharat

5G ಯುಗದಲ್ಲಿ 2G ನೆಟ್​ವರ್ಕಿಲ್ಲದ ಊರು: ಆನ್​ಲೈನ್​ ಪರೀಕ್ಷೆಗೆ ಬೆಟ್ಟ ಹತ್ತಿಳಿಯುವ ವಿದ್ಯಾರ್ಥಿಗಳು - ವಿದ್ಯಾರ್ಥಿಗಳ ಆನ್​ಲೈನ್ ಟೆಸ್ಟ್​

ಮಿಜೋರಾಂನ ಐಜ್ವಾಲ್‌ನಿಂದ 400 ಕಿ.ಮೀ. ದೂರದಲ್ಲಿರುವ ಸೈಹಾ ಜಿಲ್ಲೆಯ ದೂರದ ಮಾವ್ರೆ ಗ್ರಾಮದಲ್ಲಿ ಇಂಟರ್​ನೆಟ್ ಸಂಪರ್ಕದ ಕೊರತೆಯಿದೆ. ಹಾಗಾಗಿ ಮಿಜೋರಾಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತ್ಲಾವ್ ತ್ಲಾ ಬೆಟ್ಟ ಹತ್ತಬೇಕಿರುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

Students
Students

By

Published : Jun 8, 2021, 9:37 AM IST

ಐಜ್ವಾಲ್(ಮಿಜೋರಾಂ): ಮಿಜೋರಾಂ ರಾಜ್ಯದ ದೂರದ ಹಳ್ಳಿಯ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ತಮ್ಮ ಆನ್​ಲೈನ್​ ಸೆಮಿಸ್ಟರ್ ಪರೀಕ್ಷೆ ಬರೆಯಲು ಕಳಪೆ ನೆಟ್​​ವರ್ಕ್​​ ಸಂಪರ್ಕದಿಂದಾಗಿ ನಿತ್ಯ ಬೆಟ್ಟ ಹತ್ತಿ-ಇಳಿಯುತ್ತಿದ್ದಾರೆ.

ಐಜ್ವಾಲ್‌ನಿಂದ 400 ಕಿ.ಮೀ. ದೂರದಲ್ಲಿ ಇರುವ ಸೈಹಾ ಜಿಲ್ಲೆಯ ದೂರದ ಮಾವ್ರೆ ಗ್ರಾಮದಲ್ಲಿ ಇಂಟರ್​ನೆಟ್ ಸಂಪರ್ಕದ ಕೊರತೆ ಇದೆ. ಪರಿಣಾಮ, ಮಿಜೋರಾಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತ್ಲಾವ್ ತ್ಲಾ ಬೆಟ್ಟ ಹತ್ತಿಳಿಯುತ್ತಿದ್ದಾರೆ. ಯೋಗ್ಯವಾದ ಇಂಟರ್​ನೆಟ್ ಪಡೆಯಲು ಹಳ್ಳಿಯ ಸಮೀಪವಿರುವ ಏಕೈಕ ತಾಣ ಇದಾಗಿದೆ.

ಇದನ್ನೂ ಓದಿ: ವಿಶ್ವ ಸಾಗರ ದಿನ: ಸಮುದ್ರವನ್ನ ಸಂರಕ್ಷಿಸಲು ಮರಳು ಕಲಾಕೃತಿ ಮೂಲಕ ಪಟ್ನಾಯಕ್​ ಕರೆ

ಬೆಟ್ಟದ ಮೇಲಿರುವ ಬಾಳೆ ಎಲೆಗಳನ್ನು ಹೊಂದಿರುವ ತಾತ್ಕಾಲಿಕ ಬಿದಿರಿನ ಗುಡಿಸಲು ವಿದ್ಯಾರ್ಥಿಗಳಿಗೆ ಪ್ರತಿಕೂಲ ಹವಾಮಾನದಿಂದ ರಕ್ಷಣೆ ನೀಡುತ್ತದೆ. ವಿದ್ಯಾರ್ಥಿಗಳೆಲ್ಲಾ ಈ ಗುಡಿಸಲಿನೊಳಗೆ ಒಟ್ಟಿಗೆ ಕುಳಿತು ತಮ್ಮ ಪದವಿಪೂರ್ವ ಪರೀಕ್ಷೆಗಳನ್ನು ಬರೆಯುತ್ತಾರೆ.

ಮಾವ್ರೈ ಸೈಹಾ ಜಿಲ್ಲೆಯ ದೂರದ ಹಳ್ಳಿಯಾಗಿದ್ದು, ಸಂಪೂರ್ಣವಾಗಿ ಬೆಟ್ಟಗಳಿಂದ ಆವೃತವಾಗಿದೆ. ಆದ್ದರಿಂದ ನಮ್ಮ ಗ್ರಾಮದಲ್ಲಿ ಇಂಟರ್​ನೆಟ್ ಸಂಪರ್ಕವಿಲ್ಲ ಅನ್ನೋದು ವಿದ್ಯಾರ್ಥಿಯೊಬ್ಬನ ಮಾತು.

ರಾಷ್ಟ್ರವು 5ಜಿ ನೆಟ್‌ವರ್ಕ್‌ಗಾಗಿ ಕಾಯುತ್ತಿರುವ ಸಮಯದಲ್ಲಿ 1,700 ಜನಸಂಖ್ಯೆ ಹೊಂದಿರುವ ಈ ಗ್ರಾಮವು ಕೇವಲ 2 ಜಿ ಸಂಪರ್ಕ ಹೊಂದಿದ್ದು ಸಂಕಷ್ಟ ಅನುಭವಿಸುತ್ತಿದೆ.

ವಿದ್ಯಾರ್ಥಿಗಳು ಬೆಟ್ಟದ ತುದಿಯಲ್ಲಿ ಪರೀಕ್ಷೆಗಳನ್ನು ಕಷ್ಟಪಟ್ಟು ಬರೆಯುತ್ತಿದ್ದಾರೆ. ಗ್ರಾಮದಲ್ಲಿ 4ಜಿ ನೆಟ್‌ವರ್ಕ್ ಇಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ವಿದ್ಯಾರ್ಥಿಗಳ ಸಂಘಟನೆ ಹೇಳಿದೆ.

ABOUT THE AUTHOR

...view details