ಐಜಾಲ್ (ಮಿಜೋರಾಂ):ವಿಶ್ವದ ಅತಿದೊಡ್ಡ ಕುಟುಂಬದ ವಾರಸ್ದಾರ ಜಿಯಾಂಘಾಕಾ ಅಕಾ ಜಿಯಾನ್ (76) ಭಾನುವಾರ ನಿಧನರಾಗಿದ್ದಾರೆ. ಇವರು 38 ಪತ್ನಿಯರು, 89 ಮಕ್ಕಳು ಮತ್ತು 33 ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮಧುಮೇಹ (ಶುಗರ್) ಮತ್ತು ಅಧಿಕ ರಕ್ತದೊತ್ತಡ (ಬಿಪಿ)ದಿಂದ ಬಳಲುತ್ತಿದ್ದ ಜಿಯಾನ್, ಮೂರು ದಿನಗಳ ಕಾಲ ಬಕ್ತಾಂಗ್ ಗ್ರಾಮದಲ್ಲಿರುವ ಅವರ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದಾಗ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.