ಕರ್ನಾಟಕ

karnataka

ಮ್ಯಾನ್ಮಾರ್​ ಬಿಕ್ಕಟ್ಟು: ಮಿಜೋರಾಂಗೆ ವಲಸೆ ಬಂದ 5 ಸಾವಿರ ನೆರೆರಾಷ್ಟ್ರದ ಜನರು

By ETV Bharat Karnataka Team

Published : Nov 14, 2023, 5:26 PM IST

ಮ್ಯಾನ್ಮಾರ್​ನಲ್ಲಿ ಮಿಲಿಟರಿ ಸರ್ಕಾರ ಜನರು ದಂಗೆಯನ್ನು ಹತ್ತಿಕ್ಕುತ್ತಿದೆ. ಜನರ ಮೇಲೆ ವೈಮಾನಿಕ ದಾಳಿಯನ್ನೂ ನಡೆಸುತ್ತಿದೆ.

ಮ್ಯಾನ್ಮಾರ್​ ಬಿಕ್ಕಟ್ಟು
ಮ್ಯಾನ್ಮಾರ್​ ಬಿಕ್ಕಟ್ಟು

ಐಜ್ವಾಲ್ (ಮಿಜೋರಾಂ):ಮ್ಯಾನ್ಮಾರ್​ ಬಿಕ್ಕಟ್ಟಿನಿಂದಾಗಿ ಅಲ್ಲಿನ 5 ಸಾವಿರಕ್ಕೂ ಹೆಚ್ಚು ಜನರು ಭಾರತದ ಮಿಜೋರಾಂಗೆ ವಲಸೆ ಬಂದಿದ್ದಾರೆ. ರಾಜ್ಯದ ಗಡಿಗಳಲ್ಲಿನ ಗ್ರಾಮಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮ್ಯಾನ್ಮಾರ್‌ನಲ್ಲಿ ನಾಗರಿಕರ ದಂಗೆ ಮತ್ತು ಸೇನಾ ಕಾರ್ಯಾಚರಣೆಯಿಂದಾಗಿ ವಲಸೆ ಶುರುವಾಗಿದೆ. ಅಲ್ಲಿನ ಜನರು ನೆರೆಯ ರಾಜ್ಯವಾದ ಭಾರತದ ಮಿಜೋರಾಂಗೆ ದಾಂಗುಡಿ ಇಡುತ್ತಿದ್ದಾರೆ.

ಮ್ಯಾನ್ಮಾರ್​ನಲ್ಲಿ ಸೇನಾ ಪಡೆಗಳು ನಾಗರಿಕರ ದಂಗೆ ಹತ್ತಿಕ್ಕಲು ವೈಮಾನಿಕ ದಾಳಿ ನಡೆಸುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು ನೆರೆಯ ಮಿಜೋರಾಂ ಗಡಿಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿಜೋರಾಂನ ಐಜಿಪಿ ಲಾಲ್ಬಿಯಾಕ್ಥಂಗಾ ಖಿಯಾಂಗ್ಟೆ ಮಾಹಿತಿ ನೀಡಿ, ಮ್ಯಾನ್ಮಾರ್ ಗಡಿಯಲ್ಲಿರುವ ಎರಡು ಮಿಜೋರಾಂ ಗ್ರಾಮಗಳಲ್ಲಿ 5 ಸಾವಿರಕ್ಕೂ ಹೆಚ್ಚು ಮ್ಯಾನ್ಮಾರ್​ ಜನರು ಆಶ್ರಯ ಪಡೆದಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಅವರಲ್ಲಿ 8 ಮಂದಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಐಜ್ವಾಲ್‌ಗೆ ಕರೆದೊಯ್ಯಲಾಗಿದೆ. ಉಳಿದವರಿಗೆ ಚಂಫೈನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮ್ಯಾನ್ಮಾರ್​ ಸೇನಾ ಸಿಬ್ಬಂದಿ ಶರಣು:ಗಾಯಾಳುಗಳಲ್ಲಿ ಒಬ್ಬರು ಸೋಮವಾರ ಸಂಜೆ ಸಾವನ್ನಪ್ಪಿದ್ದಾರೆ. ಮ್ಯಾನ್ಮಾರ್​ನಲ್ಲಿ ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಆದರೆ, ಸೈನ್ಯವು ವೈಮಾನಿಕ ದಾಳಿ ನಡೆಸುತ್ತಿದೆ. 42 ಮ್ಯಾನ್ಮಾರ್ ಸೇನಾ ಸಿಬ್ಬಂದಿಗಳು ಮಿಜೋರಾಂ ಪೊಲೀಸರ ಮುಂದೆ ಶರಣಾಗಿದ್ದಾರೆ. ಅವರನ್ನು ಅಸ್ಸೋಂ ರೈಫಲ್ಸ್‌ ಕೇಂದ್ರ ಪಡೆಗೆ ಹಸ್ತಾಂತರಿಸಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಐಜಿಪಿ ಹೇಳಿದರು.

ಗಾಯಾಳುಗಳನ್ನು ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಉಪಚರಿಸುತ್ತಿವೆ. ಭಾರತಕ್ಕೆ ವಲಸೆ ಬರುತ್ತಿದ್ದಾಗ ಅನೇಕ ಮ್ಯಾನ್ಮಾರ್ ಪ್ರಜೆಗಳು ಸೇನಾದಾಳಿಗೆ ಸಿಲುಕಿದ್ದಾರೆ. ಇದರಿಂದ 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಭಾರತದ ಗಡಿಗೆ ಹೊಂದಿಕೊಂಡಿರುವ ಖವ್ಮಾವಿ ಮತ್ತು ರಿಖ್​ಹಾವ್ದರ್‌ನಲ್ಲಿನ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ ನಂತರ, ಇದಕ್ಕೆ ಪ್ರತೀಕಾರವಾಗಿ ಮ್ಯಾನ್ಮಾರ್ ಸೇನೆ ವೈಮಾನಿಕ ದಾಳಿ ನಡೆಸಿದೆ.

2021 ರಿಂದ ನಿರಾಶ್ರಿತರ ವಲಸೆ ಹೆಚ್ಚಾಗಿದೆ. ಈಶಾನ್ಯ ರಾಜ್ಯದಲ್ಲಿ ಇದು ಹೇರಳವಾಗಿದೆ. ಮಿಜೋಗಳು ಮ್ಯಾನ್ಮಾರ್​ನ ಚಿನ್ ಸಮುದಾಯದೊಂದಿಗೆ ಜನಾಂಗೀಯ ಸಂಬಂಧಗಳನ್ನೂ ಹಂಚಿಕೊಂಡಿದ್ದಾರೆ. 2021ರ ದಂಗೆಯಲ್ಲಿ ಅಧಿಕಾರ ವಹಿಸಿಕೊಂಡ ಮ್ಯಾನ್ಮಾರ್‌ ಮಿಲಿಟರಿ ಸರ್ಕಾರ ಅತಿದೊಡ್ಡ ವಿರೋಧ ಎದುರಿಸುತ್ತಿದೆ. ಸಾಮಾಜಿಕ ಹೋರಾಟಗಾರ್ತಿ ಅಂಗಸಾನ್​ ಸೂಕಿ ಅವರನ್ನು ಮಿಲಿಟರಿ ಬಂಧಿಸಿ ಜೈಲಿಗಟ್ಟಿದೆ.

ಇದನ್ನೂ ಓದಿ:ಅಕ್ರಮ ಪ್ರವೇಶ: 32 ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ ಭದ್ರತಾ ಪಡೆ

ABOUT THE AUTHOR

...view details