- ಮಿಜೋರಾಂ ಚುನಾವಣೆಯ ಮತ ಎಣಿಕೆ
- ಸ್ಪಷ್ಟ ಬಹುಮತದತ್ತ ಝಡ್‌ಪಿಎಂ ದಾಪುಗಾಲು; ಸಿಎಂ, ಡಿಸಿಎಂಗೆ ಹಿನ್ನಡೆ
- 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ ಝೆಡ್‌ಪಿಎಂ
- ಮ್ಯಾಜಿಕ್ ನಂಬರ್ ದಾಟಿ ಮುನ್ನುಗ್ಗಿದ ಝಡ್‌ಪಿಎಂ
- 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ ಎಂಎನ್‌ಎಫ್
- ಅಧಿಕಾರದ ಚುಕ್ಕಾಣಿ ಹಿಡಿಯಲು ಝಡ್‌ಪಿಎಂ ಉತ್ಸುಕ
ಮಿಜೋರಾಂ ಮತ ಎಣಿಕೆ: ಸ್ಪಷ್ಟ ಬಹುಮತದತ್ತ ಝಡ್‌ಪಿಎಂ ದಾಪುಗಾಲು; ಸಿಎಂ, ಡಿಸಿಎಂಗೆ ಹಿನ್ನಡೆ - ಅಸೆಂಬ್ಲಿ ಚುನಾವಣೆ ಫಲಿತಾಂಶ
Published : Dec 4, 2023, 8:35 AM IST
|Updated : Dec 4, 2023, 10:49 AM IST
10:45 December 04
09:38 December 04
- 21 ಕ್ಷೇತ್ರಗಳಲ್ಲಿ ಝಡ್‌ಪಿಎಂ ಮುನ್ನಡೆ
- 11 ಕ್ಷೇತ್ರಗಳಲ್ಲಿ ಎಂಎನ್ಎಫ್ ಮುನ್ನಡೆ
08:10 December 04
ಎಂಎನ್ಎಫ್, ಝಡ್‌ಪಿಎಂ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ
- ಎಂಎನ್‌ಎಫ್‌ಗೆ ಆರಂಭಿಕ ಮುನ್ನಡೆ
- 5 ಕ್ಷೇತ್ರಗಳಲ್ಲಿ ಮುನ್ನಡೆ
- ಕಾಂಗ್ರೆಸ್, ಬಿಜೆಪಿ ತಲಾ ಒಂದು ಕ್ಷೇತ್ರಗಳಲ್ಲಿ ಮುನ್ನಡೆ
- ಭಾರತೀಯ ಚುನಾವಣಾ ಆಯೋಗದ ಮಾಹಿತಿ
Mizoram Assembly election result-2023: 40 ಸದಸ್ಯ ಬಲದ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮಧ್ಯಾಹ್ನದ ವೇಳೆ ಪೂರ್ಣ ಫಲಿತಾಂಶ ಹೊರಬರಲಿದೆ. 8.57 ಲಕ್ಷ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಎಂಎನ್ಎಫ್, ಝಡ್‌ಪಿಎಂ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದೆ.
ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆದಿದ್ದು, ಶೇ.80.66ರಷ್ಟು ಜನರು ಮತ ಹಕ್ಕು ಚಲಾಯಿಸಿದ್ದರು. ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಇಂದು ಮಿಜೋರಾಂ ಫಲಿತಾಂಶ ಪ್ರಕಟವಾಗಲಿದೆ.
ಮಿಜೋರಾಂನ ಜನರಿಗೆ ಡಿಸೆಂಬರ್ 3ರ ಭಾನುವಾರ ವಿಶೇಷ ಪ್ರಾಮುಖ್ಯತೆಯ ದಿನವಾಗಿದ್ದರಿಂದ ಮತ ಎಣಿಕೆ ದಿನಾಂಕವನ್ನು ಒಂದು ದಿನ ಮುಂದೂಡಲಾಗಿತ್ತು.