ನವದೆಹಲಿ:ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದ ಮಿಥುನ್ ಚಕ್ರವರ್ತಿಗೆ ಇದೀಗ Y+ ಭದ್ರತೆ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯದಿಂದ ಅವರಿಗೆ ಭದ್ರತೆ ನೀಡಲಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಇದೀಗ ರಕ್ಷಣೆ ನೀಡಲಿದೆ.
Y+ ಭದ್ರತೆ ಪಡೆದುಕೊಳ್ಳುವ ವ್ಯಕ್ತಿ 11 ಕಮಾಂಡೊ ಒಳಗೊಂಡ ವಿಸ್ತಾರವಾದ ಭದ್ರತೆ ಪಡೆದುಕೊಳ್ಳಲಿದ್ದು, 55ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿವಾಸದ ಸುತ್ತ ನಿಯೋಜನೆಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಬಂಗಾಳದಲ್ಲಿ ಅನೇಕ ವ್ಯಕ್ತಿಗಳಿಗೆ ಈ ರೀತಿಯ ಭದ್ರತೆ ನೀಡಲಾಗಿದ್ದು, ಒಂದೇ ತಿಂಗಳಲ್ಲಿ ಬಂಗಾಳದಲ್ಲಿ ಸುಮಾರು 60 ಮುಖಂಡರಿಗೆ ಕೇಂದ್ರ ಗೃಹ ಸಚಿವಾಲಯ X ಮತ್ತು Y ಮಟ್ಟದ ಭದ್ರತೆ ನೀಡಿದೆ.