ನವದೆಹಲಿ :ಎರಡು ದಿನಗಳ ಹಿಂದೆ ಕಾಣೆಯಾಗಿದ್ದ 42 ವರ್ಷದ ಮಹಿಳಾ ನ್ಯಾಯಾಧೀಶರೊಬ್ಬರು ದಕ್ಷಿಣ ದೆಹಲಿಯ ರಾಜ್‌ಪುರ ಪ್ರದೇಶದಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಲ್ಲಿನ ಸಾಕೇತ್ ಕೋರ್ಟ್‌ನಲ್ಲಿ ಜಡ್ಜ್ ಆಗಿದ್ದರು. ಅಲ್ಲದೇ, ಇವರ ಪತಿ ಅಶೋಕ್ ಬೇನಿವಾಲ್ ಕೂಡ ನ್ಯಾಯಾಧೀಶರಾಗಿದ್ದಾರೆ. ಸಾಕೇತ್ ಕೋರ್ಟ್ ವಸತಿ ನಿಲಯದಲ್ಲಿ ಈ ದಂಪತಿ ವಾಸಿಸುತ್ತಿದ್ದರು.
ಮೇ 27ರಂದು ಬೆಳಗ್ಗೆ 11.30ರ ಸುಮಾರಿಗೆ ಮಾಳವೀಯ ನಗರ ಮಾರುಕಟ್ಟೆಗೆ ಹೋಗಿದ್ದ ಅವರು ಮರಳಿ ಮನೆಗೆ ಬಂದಿರಲಿಲ್ಲ. ಹೀಗಾಗಿ, ಅಂದು ರಾತ್ರಿಯೇ 10.30ಕ್ಕೆ ಪೊಲೀಸ್ ಠಾಣೆಗೆ ನ್ಯಾ.ಅಶೋಕ್ ಬೇನಿವಾಲ್ ದೂರು ನೀಡಿದ್ದರು. ಅಂತೆಯೇ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಇವರ ಪತ್ತೆಗಾಗಿ ಪೊಲೀಸರು ಮನೆಯ ಸುತ್ತ-ಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸಿದ್ದರು. ಒಂದು ಸಿಸಿ ಕ್ಯಾಮೆರಾದಲ್ಲಿ ಆಟೋ ದಾಖಲಾಗಿತ್ತು. ಅಲ್ಲಿಂದ ಇದರ ಜಾಡು ಹಿಡಿದ ಪೊಲೀಸರು ಆಟೋ ಚಾಲಕನನ್ನು ಪತ್ತೆ ಹಚ್ಚಿಸಿದ್ದರು. ಅಲ್ಲದೇ, ಕಾಣೆಯಾದ ಮಹಿಳಾ ನ್ಯಾಯಾಧೀಶರ ಬಗ್ಗೆ ವಿಚಾರಣೆಗೊಳಪಡಿದ್ದರು. ಈ ವೇಳೆ ಮೈದಾನ್ ಗರ್ಹಿ ಪ್ರದೇಶದ ರಾಜ್‌ಪುರದಲ್ಲಿ ಅವರನ್ನು ಬಿಟ್ಟಿರುವುದಾಗಿ ಆಟೋ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.