ಕರ್ನಾಟಕ

karnataka

ETV Bharat / bharat

ಸ್ಟ್ರಾಂಗ್ ರೂಂ ಕೀ ನಾಪತ್ತೆ: ಕಡಲೂರಿನಲ್ಲಿ ಮತ ಎಣಿಕೆ ವಿಳಂಬ - ವೆಲ್ಲೂರಿನಲ್ಲಿ ಡಿಎಂಕೆಯ ತೃತೀಯಲಿಂಗಿ ಅಭ್ಯರ್ಥಿ ಗೆಲುವು

ಪಾಲಿಕೆ ವ್ಯಾಪ್ತಿಯ 153 ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳನ್ನು ಕಡಲೂರಿನ ಸೇಂಟ್ ವಲನಾರ್ ಶಾಲೆಯ ಸ್ಟ್ರಾಂಗ್ ರೂಂನ ಕೀಲಿ ಕಳವಾಗಿದ್ದಕ್ಕೆ ಅಧಿಕಾರಿಗಳು ಮಿಷಿನ್​ ತರಿಸಿ ಬೀಗವನ್ನು ತೆಗೆಸಿದರು. ಇದರಿಂದ ಬೆಳಗ್ಗೆ 8.35ಕ್ಕೆ ಸ್ಟ್ರಾಂಗ್ ರೂಂ ತೆರೆದಿದ್ದರಿಂದ ಎಣಿಕೆ 35 ನಿಮಿಷ ತಡವಾಯಿತು..

ganga nayak
ಡಿಎಂಕೆ ಅಭ್ಯರ್ಥಿ ಗಂಗಾನಾಯಕ್

By

Published : Feb 22, 2022, 6:47 PM IST

Updated : Feb 22, 2022, 7:19 PM IST

ಕಡಲೂರು :ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಇದರಲ್ಲಿ ಇಂದು ಕಡಲೂರು ಪಾಲಿಕೆಯ 45 ವಾರ್ಡ್‌ಗಳಲ್ಲಿ ನಡೆದ ಮತ ಎಣಿಕೆಯ ಸ್ಟ್ರಾಂಗ್ ರೂಮ್‌ನ ಕೀ ನಾಪತ್ತೆಯಾದ ಕಾರಣ ಸುಮಾರು 35 ನಿಮಿಷ ಎಣಿಕೆ ಕಾರ್ಯ ತಡವಾಯಿತು.

ಸ್ಟ್ರಾಂಗ್ ರೂಂ ಕೀ ನಾಪತ್ತೆ ಅಧಿಕಾರಿಗಳು ಬೀಗವನ್ನು ಮಿಷಿನ್​ ತರಿಸಿ ಬೀಗವನ್ನು ತೆಗೆಸಿದರು

ಪಾಲಿಕೆ ವ್ಯಾಪ್ತಿಯ 153 ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳನ್ನು ಕಡಲೂರಿನ ಸೇಂಟ್ ವಲನಾರ್ ಶಾಲೆಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಮತ ಎಣಿಕೆಗೆ ಅಧಿಕಾರಿಗಳು ಸಿದ್ಧತೆ ನಡೆಸಿದಾಗ ಸ್ಟ್ರಾಂಗ್ ರೂಂ ಕೀ ನಾಪತ್ತೆಯಾಗಿರುವುದು ಗೊತ್ತಾಗಿದೆ.

ಎಷ್ಟು ಹುಡುಕಿದರೂ ಕೀಲಿಗಳು ಸಿಗಲಿಲ್ಲ. ಆದ ಅಧಿಕಾರಿಗಳು ಬೀಗವನ್ನು ಮೆಷಿನ್​ ತರಿಸಿ ತೆಗೆಸಿದರು. ಹೀಗಾಗಿ ಬೆಳಗ್ಗೆ 8.35ಕ್ಕೆ ಸ್ಟ್ರಾಂಗ್ ರೂಂ ತೆರೆದಿದ್ದರಿಂದ ಮತ ಎಣಿಕೆ 35 ನಿಮಿಷ ತಡವಾಯಿತು.

ವೆಲ್ಲೂರಿನಲ್ಲಿ ಡಿಎಂಕೆಯ ತೃತೀಯಲಿಂಗಿ ಅಭ್ಯರ್ಥಿ ಗೆಲುವು :ಇದರಲ್ಲಿ ವೆಲ್ಲೂರು ಕಾರ್ಪೊರೇಷನ್‌ನಲ್ಲಿ 37ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಡಿಎಂಕೆ ಅಭ್ಯರ್ಥಿ ಗಂಗಾನಾಯಕ್ 2131 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಗಂಗಾ ನಾಯಕ್ ಅವರು ಸ್ವತಂತ್ರ ಅಭ್ಯರ್ಥಿ ಮರಿಯಾ ಅವರನ್ನು 15 ಮತಗಳಿಂದ ಸೋಲಿಸಿದರು. ಮರಿಯಾ 2116 ಮತಗಳನ್ನು ಪಡೆದರು.

ವೆಲ್ಲೂರು :ತಮಿಳುನಾಡಿನ 21 ಕಾರ್ಪೊರೇಶನ್‌ಗಳು, 138 ಪುರಸಭೆಗಳು ಮತ್ತು 489 ಪಟ್ಟಣ ಪಂಚಾಯತ್‌ಗಳಿಗೆ ಫೆಬ್ರವರಿ 19ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆ ದಿತ್ತು.

ಇದನ್ನೂ ಓದಿ:ಆಫ್‌ಲೈನ್ ಪರೀಕ್ಷೆ ರದ್ದು ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ

Last Updated : Feb 22, 2022, 7:19 PM IST

For All Latest Updates

TAGGED:

ABOUT THE AUTHOR

...view details