ಕರ್ನಾಟಕ

karnataka

ETV Bharat / bharat

ಕೋವಿಡ್‌ ಮರಣದ ಲೆಕ್ಕ ಪಕ್ಕಾ: ಅಧ್ಯಯನ ವರದಿಗೆ ಕೇಂದ್ರದ ಸ್ಪಷ್ಟನೆ - ಮನ್ಸುಖ್‌ ಮಾಂಡವಿಯಾ

ಕೋವಿಡ್‌ನಿಂದ ಮೃತಪಟ್ಟವರ ಅಧಿಕೃತ ಅಂಕಿ ಅಂಶ ಸರಿಯಾಗಿಯೇ ಇದೆ. ಇತರೆ ಕೆಲ ಅಧ್ಯಯನಗಳು ಹೇಳಿರುವ ಮಾಹಿತಿಯೇ ತಪ್ಪು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ. ಸಾವಿನ ಸಂಖ್ಯೆ ನೋಂದಾಯಿಸಲು ದೇಶದಲ್ಲಿ ಉತ್ತಮ ವ್ಯವಸ್ಥೆ ಇದೆ ಎಂದು ಹೇಳಿದೆ.

missing out on covid deaths unlikely govt on indias covid-19 death toll
ಕೋವಿಡ್‌ ಮರಣದ ಲೆಕ್ಕ ಪಕ್ಕಾ; ಅವರು ಹೇಳಿರೋದ್ರಲ್ಲಿ ಸತ್ಯಾಂಶವಿಲ್ಲ!

By

Published : Jul 22, 2021, 3:20 PM IST

ನವದೆಹಲಿ: ಮಹಾಮಾರಿ ಕೋವಿಡ್‌ಗೆ ದೇಶದಲ್ಲಿ ಮೃತಪಟ್ಟವರ ಅಂಕಿ ಅಂಶಗಳಿಗಿಂತ ಇನ್ನೂ ಹೆಚ್ಚಿದೆ ಎಂಬ ಕೆಲ ವರದಿಗಳ ಸಂಬಂಧ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಇವೆ. ಈ ಎಲ್ಲಾ ಆರೋಪಗಳನ್ನು ಕೇಂದ್ರ ಆರೋಗ್ಯ ಇಲಾಖೆ ನಿರಾಕರಿಸಿದೆ. ಹೆಚ್ಚುವರಿ ಸಾವುಗಳೆಲ್ಲವನ್ನು ಕೋವಿಡ್‌ ಸಾವುಗಳು ಎಂದು ವರದಿಯಾಗಿದೆ. ಅದು ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶದಲ್ಲಿ ಸಾವಿನ ಸಂಖ್ಯೆ ನೋಂದಾಯಿಸಲು ಬಲವಾದ ವ್ಯವಸ್ಥೆ ಇದೆ. ಕೋವಿಡ್‌ ಸಾವುಗಳು ಬಹಳ ವಿರಳ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಗಮನಕ್ಕೆ ಬಾರದಿರುವ ಸಾವುಗಳ ಸಾಧ್ಯತೆಗಳು ಕಡಿಮೆ. ಕೊರೊನಾ ವಿವರಗಳನ್ನು ಜಿಲ್ಲಾ ಮಟ್ಟದಲ್ಲಿ ನೋಂದಾಯಿಸಿ ಮೇಲ್ವರ್ಗಕ್ಕೆ ಹಸ್ತಾಂತರಿಸಲಾಗುವುದು. ಇದನ್ನು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಹಸ್ತಾಂತರಿಸುತ್ತವೆ ಎಂದು ಹೇಳಿದೆ.

ದೇಶಾದ್ಯಂತ ವೈರಸ್‌ನಿಂದ ಸಾಯುವ ಅಪಾಯ ಒಂದೇ ಎಂಬ ಅಂಶವನ್ನು ಆಧರಿಸಿ ಸಾವಿನ ಸಂಖ್ಯೆಯನ್ನು ಲೆಕ್ಕಹಾಕಲಾಗಿದೆ. ಪ್ರತ್ಯಕ್ಷ ಮತ್ತು ಪರೋಕ್ಷ ಅಂಶಗಳನ್ನು ನಿರ್ಲಕ್ಷಿಸಲಾಗಿದೆ. ಜನಸಂಖ್ಯೆಯ ವಿವಿಧ ವಿಭಾಗಗಳು ಮತ್ತು ಅವರ ಜೀನೋಮ್ ರಚನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ರೋಗ ನಿರೋಧಶಕ್ತಿ ಬೇಗ ನಾಶವಾಗುತ್ತದೆ, ಇದರಿಂದ ಮರಣದ ಪ್ರಮಾಣ ಹೆಚ್ಚಾಗುತ್ತದೆ. ದಾಖಲಾಗಿರುವ ಎಲ್ಲಾ ಮರಣಗಳನ್ನು ಕೋವಿಡ್‌ನಿಂದಾದ ಮರಣಗಳು ಎಂದು ಈ ಅಧ್ಯಯನ ಪರಿಗಣಿಸಿರುವುದು ಸಂಪೂರ್ಣವಾಗಿ ದಾರಿ ತಪ್ಪಿಸುವಂತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ: ಕೋವಿಡ್‌ ಸೋಂಕಿತ ಮಕ್ಕಳ ಸಾವಿನ ಪ್ರಮಾಣ ಕಡಿಮೆ: ಅಧ್ಯಯನ ವರದಿ

ಇದೇ ವಿಚಾರ ಸಂಬಂಧ ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೋವಿಡ್‌ ಸಾವುಗಳನ್ನು ಮರೆಮಾಚುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ ಎಂದು ಇಲಾಖೆ ಹೇಳಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳುಹಿಸಿದ ಡೇಟಾವನ್ನು ಮಾತ್ರ ಪ್ರಕಟಿಸುವುದಾಗಿ ಅದು ಹೇಳಿದೆ. ಮಾರ್ಗಸೂಚಿಗಳ ಪ್ರಕಾರ ಸಾವುಗಳನ್ನು ಸರಿಯಾಗಿ ನೋಂದಾಯಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ಬಾರಿ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

49 ಲಕ್ಷ ಹೆಚ್ಚು ಸಾವು!

ಯು.ಎಸ್. ಸೆಂಟರ್ ಫಾರ್ ಗ್ಲೋಬಲ್ ಡೆವಲಪ್ಮೆಂಟ್ ಅಂದಾಜಿನ ಪ್ರಕಾರ ರಾಷ್ಟ್ರವ್ಯಾಪಿ ಕೋವಿಡ್‌ ಸಾವುಗಳ ಸಂಖ್ಯೆ ಸರ್ಕಾರದ ಅಂಕಿ ಅಂಶಗಳಿಗಿಂತ 34 ದಶಲಕ್ಷದಿಂದ 49 ದಶಲಕ್ಷ ಹೆಚ್ಚಾಗಿದೆ. ಜನವರಿ 2020 ಮತ್ತು ಜೂನ್ 2021ರ ನಡುವಿನ ಸಾವಿನ ಅಂಕಿ ಅಂಶಗಳನ್ನು ವಿಶ್ಲೇಷಿಸಲಾಗಿದೆ. ಈ ಅವಧಿಯಲ್ಲಿನ ಸಾವುಗಳನ್ನು 3 ವಿಭಿನ್ನ ರೀತಿಯಲ್ಲಿ ಲೆಕ್ಕ ಹಾಕಲಾಗಿದೆ.

ABOUT THE AUTHOR

...view details