ಕೃಷ್ಣ(ಆಂಧ್ರಪ್ರದೇಶ) :ನಾಲ್ಕು ವರ್ಷಗಳ ಹಿಂದೆ ಮನೆ ತೊರೆದಿದ್ದ ವೃದ್ಧೆಯೊಬ್ಬಳನ್ನು ಕೃಷ್ಣ ಜಿಲ್ಲೆಯ ಪೆನಗಂಚಿಪ್ರೊಲುವಿನ ಮಾಜಿ ಸರ್ಪಂಚ್ ಸುಧೀರ್ ಎಂಬುವರು ತನ್ನ ಮನೆಗೆ ಸೇರಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ವೃದ್ಧೆಯನ್ನು ಗಮನಿಸುತ್ತಿದ್ದ ಸುಧೀರ್ ಅವರು, ಆಕೆಯ ಬಗ್ಗೆ ವಿವರ ತಿಳಿದುಕೊಂಡಿದ್ದಾರೆ. ಅಲ್ಲದೇ ಆಕೆಯೊಂದಿಗೆ ಹಲವು ಬಾರಿ ಮಾತನಾಡಿ ಕುಟುಂಬದ ಬಗ್ಗೆ ಕೇಳಿದ್ದಾರೆ.
ಕೋವಿಡ್ 2ನೇ ಅಲೆಗೂ ಮುಂಚೆ ಆಕೆಯನ್ನು ಸ್ವಗ್ರಾಮಕ್ಕೆ ಕಳುಹಿಸಲು ಪ್ರಯತ್ನಿಸಿದರಾದರೂ ಆಗಲಿಲ್ಲ. ಹೀಗಾಗಿ, ಆಕೆಯ ಫೋಟೊವನ್ನು ತೆಗೆಸಿ ಕಡಪ ಜಿಲ್ಲೆಯ ತನ್ನ ಸ್ನೇಹಿತರಿಗೆ ಕಳುಹಿಸಿ ವಿಚಾರಿಸಲು ಹೇಳಿದ್ದಾರೆ.