ಕರ್ನಾಟಕ

karnataka

ETV Bharat / bharat

Miss World-2021: ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮುತ್ತಿನ ನಗರಿಯ ಸುಂದರಿ ಮಾನಸ - ಮಾನಸ ವಾರಣಾಸಿ

70th Miss World pageant: 2020ರಲ್ಲಿ ಭಾರತದ ಸುಂದರಿಯಾಗಿ ಆಯ್ಕೆಯಾಗಿರುವ ಮಾನಸ ವಾರಣಾಸಿ ಇದೀಗ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ.

Manasa Varanasi represent India
Manasa Varanasi represent India

By

Published : Dec 16, 2021, 6:23 AM IST

ಹೈದರಾಬಾದ್​: 2021ರ ಭುವನ ಸುಂದರಿ ಕಿರೀಟ ಈಗಾಗಲೇ ಭಾರತದ ಪಾಲಾಗಿದ್ದು, 21 ವರ್ಷದ ಹರ್ನಾಜ್​ ಕೌರ್ ಸಂಧು ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ. ಇದರ ಬೆನ್ನಲ್ಲೇ ಇಂದು 70ನೇ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿದ್ದು, ಮುತ್ತಿನನಗರಿಯ ಸುಂದರಿ ಮಾನಸ ವಾರಣಾಸಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಭಾರತದ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿರುವ ಮಾನಸ

Miss India World 2020.. ಹೈದರಾಬಾದ್​ನಲ್ಲಿ ಜನಿಸಿರುವ 23 ವರ್ಷದ ಮಾನಸ ವಾರಣಾಸಿ ವೃತ್ತಿಯಲ್ಲಿ ಹಣಕಾಸು ಮಾಹಿತಿ ವಿನಿಮಯ ವಿಶ್ಲೇಷಕರಾಗಿದ್ದಾರೆ. ಈಗಾಗಲೇ 2020ರಲ್ಲಿ ಭಾರತದ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 70ನೇ ವಿಶ್ವ ಸುಂದರಿ ಸ್ಪರ್ಧೆ ಸಹ ಇಸ್ರೇಲ್​​ನಲ್ಲಿ ಇಂದು ನಡೆಯುತ್ತಿದ್ದು, ಇದರಲ್ಲಿ ಹೈದರಾಬಾದ್​ ಚೆಲುವೆಗೆ ಕಿರೀಟ ಒಲಿದು ಬರಬಹುದು ಎಂಬ ನಿರೀಕ್ಷೆ ಇದೆ.

ಈಗಾಗಲೇ 2020ರಲ್ಲಿ ಮಿಸ್​​ ಇಂಡಿಯಾ ವರ್ಲ್ಡ್ ​ಆಗಿ ಹೊರಹೊಮ್ಮಿರುವ ಮಾನಸಗೆ ಪ್ರಿಯಾಂಕಾ ಚೋಪ್ರಾ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ಪ್ರಮುಖವಾಗಿ ಸಂಗೀತ, ಯೋಗ ಹಾಗೂ ಪುಸ್ತಕಗಳನ್ನು ಓದುವುದರಲ್ಲಿ ಇವರು ಹೆಚ್ಚು ಆಸಕ್ತಿ ಹೊಂದಿದ್ದಾರೆ.

ABOUT THE AUTHOR

...view details