ನವದೆಹಲಿ :ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ (ಎನ್‌ಐಒಎಸ್) ಭಗವದ್ಗೀತೆ ಮತ್ತು ರಾಮಾಯಣವನ್ನು ಮದರಸಾಗಳಲ್ಲಿ ಪರಿಚಯಿಸಲಿದೆ ಎಂಬ ಮಾಧ್ಯಮ ವರದಿ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯ ಅಂಗವಾಗಿ 3, 5 ಮತ್ತು 8 ನೇ ತರಗತಿಗಳಿಗೆ 100 ಮದ್ರಸಗಳಲ್ಲಿ ಪ್ರಾಚೀನ ಭಾರತೀಯ ಜ್ಞಾನ ಮತ್ತು ಪರಂಪರೆಯ ಹೊಸ ಪಠ್ಯಕ್ರಮವನ್ನು ಎನ್‌ಐಒಎಸ್ ಪರಿಚಯಿಸಲಿದೆ ಎಂದು ದಿನ ಪತ್ರಿಕೆಯೊಂದು ವರದಿ ಮಾಡಿತ್ತು. ಇದು ಸತ್ಯಕ್ಕೆ ದೂರವಾದ ದುರುದ್ದೇಶಪೂರಿತ ವರದಿ ಎಂದು ಇದೀಗ ಶಿಕ್ಷಣ ಸಚಿವಾಲಯ ಹೇಳಿದೆ.