ನಳಂದ (ಬಿಹಾರ): ಚಂದ್‌ಪುರ ಗ್ರಾಮದ ಬಳಿಯ ರೈಲು ಹಳಿಗಳು ಹಾನಿಯೊಳಗಾಗಿದ್ದು, ಗ್ರಾಮಸ್ಥರ ಗಮನದಿಂದ ಸಂಭವಿಸಬಹುದಾದ ಭಾರಿ ದುರಂತವೊಂದು ತಪ್ಪಿದೆ.
ಬೇರ್ಪಟ್ಟಿದ್ದ ರೈಲು ಹಳಿಗಳ ಬಗ್ಗೆ ಗ್ರಾಮಸ್ಥರು ಗೇಟ್‌ಮ್ಯಾನ್‌ಗೆ ಮಾಹಿತಿ ನೀಡಿದ್ದು, ಅವರು ಬಿಹಾರ ಶರೀಫ್ ರೈಲು ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಅನಾಹುತವನ್ನು ತಪ್ಪಿಸಿದ್ದಾರೆ. ಅದೃಷ್ಟವಶಾತ್, ಉಳಿದ ದಿನಕ್ಕೆ ಹೋಲಿಸಿದರೆ ಭಾನುವಾರ ರೈಲುಗಳ ಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಇವು ರಾಜ್‌ಗೀರ್-ಭಕ್ತ್ಯಾರ್‌ಪುರ ರೈಲ್ವೆ ವಿಭಾಗದ ರೈಲು ಹಳಿಗಳಾಗಿದ್ದು, ಇದೇ ಟ್ರ್ಯಾಕ್ ಮೂಲಕ ನವದೆಹಲಿಗೆ ತೆರಳುತ್ತಿದ್ದ ಶ್ರಮಜೀವಿ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲನ್ನು ಹೊರತುಪಡಿಸಿ ಮತ್ತೊಂದು ಎಕ್ಸ್‌ಪ್ರೆಸ್ ರೈಲು, ಸಂಚರಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಒಂದು ಜೋಡಿ ಪ್ಯಾಸೆಂಜರ್ ರೈಲು ಮತ್ತು ಗೂಡ್ಸ್ ರೈಲು ಈಗಾಗಲೇ ರೈಲು ಹಳಿಗಳ ಮುರಿದ ಭಾಗವನ್ನು ದಾಟಿರುವುದನ್ನು ರೈಲ್ವೆ ಕ್ರಾಸಿಂಗ್‌ನಲ್ಲಿದ್ದ ಗೇಟ್‌ಮ್ಯಾನ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.