ಬರೇಲಿ(ಉತ್ತರ ಪ್ರದೇಶ): ರಾಜ್ಯದ ಬರೇಲಿ ಪೊಲೀಸ್ ಚೌಕಿ (ಔಟ್ ಪೋಸ್ಟ್)ಗೆ ವ್ಯಕ್ತಿಯೊಬ್ಬ ನುಗ್ಗಿ ಗುಂಡಿನ ದಾಳಿ ನಡೆಸಿದ್ದು, ಕಾನ್ಸ್ಟೇಬಲ್ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಗಾಯಗೊಂಡ ಕಾನ್ಸ್ಟೇಬಲ್ ವಿಶಾಲ್ ಶರ್ಮಾ ಅವರು ಕರ್ತವ್ಯದಲ್ಲಿದ್ದರು. ಈ ವೇಳೆ, ಬೈಕ್ನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಚೌಕಿ ಒಳಗೆ ನುಗ್ಗಿದ್ದು, ಎಸ್ಐ ಅವರನ್ನು ವಿಚಾರಿಸಿದ್ದಾನೆ. ಈ ವೇಳೆ, ಅವರು ಹೊರಗೆ ಹೋಗಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ. ಅಲ್ಲದೇ ನೀನು ಕುಡಿದು ಬಂದಿದ್ದೀಯಾ? ಎಂದು ಪ್ರಶ್ನಿಸಿದ್ದು, ಆತನನ್ನು ಹೊರ ಹೋಗದಂತೆ ತಡೆದಿದ್ದಾರೆ. ಈ ವೇಳೆ, ಆತ ಗನ್ ತೆಗೆದು ಗುಂಡು ಹಾರಿಸಿದ್ದು, ಶರ್ಮಾ ಅವರ ಬೆನ್ನಿನ ಭಾಗಕ್ಕೆ ತಗುಲಿದೆ.