ವೈಶಾಲಿ (ಬಿಹಾರ): ಮದುವೆ ಸಮಾರಂಭದ ನಿಮಿತ್ತ ನಡೆಯುತ್ತಿದ್ದ ಗ್ರಾಮ ಪೂಜೆಯಲ್ಲಿ ನೃತ್ಯದ ವಿಚಾರವಾಗಿ ಬಾಲಕಿಯೊಬ್ಬಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಆಘಾತಕಾರಿ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಅದೃಷ್ಟವಾಶತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇಲ್ಲಿನ ರಾಜಪಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಯುವಕನ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮದುವೆ ಪೂರ್ವದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪೂಜೆಯಲ್ಲಿ ಹುಡುಗಿಯರು ಸೇರಿಕೊಂಡು ನೃತ್ಯ ಮಾಡುತ್ತಿದ್ದರು. ಈ ವೇಳೆ, ಕೆಲ ಹುಡುಗರು ಒಳ ನುಗ್ಗಿ ಹುಡುಗಿಯರ ಮಧ್ಯೆ ಕುಣಿಯಲು ಮುಂದಾಗಿದ್ದಾರೆ. ಈಗ ಇದನ್ನು ವಿರೋಧಿಸಿದ ಹುಡುಗಿಯರು ಆ ಕಿಡಿಗೇಡಿ ಹುಡುಗರನ್ನು ಅಲ್ಲಿಂದ ಓಡಿಸಿದ್ದಾರೆ.
ರಾತ್ರಿ ಬಾಲಕಿಯನ್ನು ತಡೆದು ಬೆದರಿಕೆ ತಂತ್ರ: ತಾವು ಡ್ಯಾನ್ಸ್ ಮಾಡುತ್ತಿದ್ದಾಗ ಒಳ ನುಗ್ಗಿದ ಕಾರಣ ಹಾಗೂ ಹುಡುಗಿಯರು ಓಡಿಸಿದ್ದರಿಂದ ಆ ಕಿಡಿಗೇಡಿ ಹುಡುಗರು ಸಿಟ್ಟಾಗಿದ್ದಾರೆ. ಹೀಗಾಗಿಯೇ ಹುಡುಗಿಯರ ಗುಂಪಿನಲ್ಲಿದ್ದ 6ನೇ ತರಗತಿಯ ಬಾಲಕಿಯನ್ನು ಟಾರ್ಗೆಟ್ ಮಾಡಿ ಆಕೆಗೆ ಬೆದರಿಸುವ ಯಂತ್ರ ಮಾಡಿದ್ದಾರೆ. ಮರು ದಿನ ಮದುವೆ ಮೆರವಣಿಗೆ ಮುಗಿಸಿ ಹಿಂತಿರುಗುತ್ತಿದ್ದಾಗ ಪುಂಡ ಹುಡುಗರು ತಡೆದು ಗಲಾಟೆ ಮಾಡಿದ್ದಾರೆ. ಈ ವೇಳೆ ಬಾಲಕಿ ಚೀರಿಕೊಂಡಿದ್ದರಿಂದ ಆಕೆಯನ್ನು ಬಿಟ್ಟು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಬಾಲಕಿ ಮನೆಗೆ ಬಂದು ಅಜ್ಜಿ ಜೊತೆ ಮಲಗಿದ್ದಾಳೆ.
ಮರು ದಿನ ಮತ್ತೆ ಬಾಲಕಿಗಾಗಿ ಕಾದ ಪುಂಡರು: ಅವತ್ತು ರಾತ್ರಿಯನ್ನು ಬಾಲಕಿ ಚೀರಾಟ ಮಾಡಿದ್ದರಿಂದ ಪುಂಡರು ಬಿಟ್ಟು ಹೋಗಿದ್ದಾರೆ. ಆದರೆ, ಇದರ ಮರು ದಿನ ಸಹ ಬಾಲಕಿಗಾಗಿ ಪುಂಡರ ಗುಂಪಿನಲ್ಲಿದ್ದ ಇಬ್ಬರು ಸಹೋದರರು ಕಾದು ಕುಳಿತಿದ್ದಾರೆ. ಬೆಳಗ್ಗೆ ಬಾಲಕಿ ಬರ್ಹಿದೆಸೆಗೆ ತೆರಳಲು ಮನೆಯಿಂದ ಹೊರಟಿದ್ದಳು. ಈ ವೇಳೆ ಬಂದ ಇಬ್ಬರು ಸಹೋದರರು ಆಕೆಯನ್ನು ಹಿಡಿದುಕೊಂಡಿದ್ದಾರೆ. ಅಲ್ಲದೇ, ಬಾಲಕಿಯ ಬಾಯಿ ಮುಚ್ಚಿ ಹಿಡಿದು ಬೇರೆಡೆ ಕರೆದೊಯ್ದು ಬೆದರಿಸಿದ್ದಾರೆ.