ಲಖಿಸರೈ (ಬಿಹಾರ):ಚಲಿಸುತ್ತಿದ್ದ ರೈಲಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಬಿಹಾರದ ದಾನಾಪುರ ಜಿಲ್ಲೆಯ ಕಿಯುಲ್ ನಿಲ್ದಾಣದ ಬಳಿ ನಡೆದಿದೆ. ರೈಲ್ವೆ ನಿಲ್ದಾಣದ ಹೋಂಗಾರ್ಡ್ಗೆ ಗುಂಡು ತಾಗಿ, ಗಾಯವಾಗಿದೆ.
ಡೆಹ್ರಾಡೂನ್-ಹೌರಾ ಉಪಾಸನಾ ಎಕ್ಸ್ಪ್ರೆಸ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಕೆಲಸ ಮುಗಿಸಿ ಹೊರಡುತ್ತಿದ್ದ ಹೋಂ ಗಾರ್ಡ್ ಭುನೇಶ್ವರ್ ಕುಮಾರ್ ಅವರಿಗೆ ಗಾಯವಾಗಿದೆ. ನಂತರ ಸಾರ್ವಜನಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ರೈಲ್ವೆ ಮೇಲೆ ಗುಂಡು ಹಾರಿಸಲು ಕಾರಣವೇನು? :ಪಶ್ಚಿಮ ಬಂಗಾಳ ನಿವಾಸಿಯಾದ ಕುನಾಲ್ ಎಂಬಾತ ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಪಾಟ್ನಾದಲ್ಲಿ ಜೈಲಿನಲ್ಲಿದ್ದ ಆತನನ್ನು ಬಂಗಾಳದ ಸೀಲ್ಡಾಗೆ ಕರೆದೊಯ್ಯಲಾಗುತ್ತಿತ್ತು. ಕುನಾಲ್ನನ್ನು ಕೊಲ್ಲುವುದಾಗಿ ಅಪರಿಚಿತರಿಂದ ಬೆದರಿಕೆ ಬಂದ ಹಿನ್ನೆಲೆ ಆತನನ್ನು ಅಂಗವಿಕಲರ ಬೋಗಿಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ:ಇಂದು ರಾಷ್ಟ್ರಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲಿ ಸ್ತಬ್ಧವಾಗಲಿವೆ 6 ಲಕ್ಷಕ್ಕೂ ಹೆಚ್ಚು ಲಾರಿಗಳು!
ಆದರೂ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಅದೇ ರೈಲಿನಲ್ಲಿ ಕರ್ತವ್ಯ ಮುಗಿಸಿ ಹೊರಡುತ್ತಿದ್ದ ಹೋಂ ಗಾರ್ಡ್ ಭುನೇಶ್ವರ್ ಕುಮಾರ್ಗೆ ಕೈಗೆ ಗಾಯವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈಗ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.