ಮಿರ್ಜಾಪುರ್:ಮನೆಯಲ್ಲಿ ಮಲಗಿದ್ದ ವೇಳೆ ಛಾವಣಿ ಕುಸಿದು ಬಿದ್ದಿದ್ದು ಒಂದೇ ಕುಟುಂಬದ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳವಾರ ರಾತ್ರಿ ಛೋಟಿ ಗುದ್ರಿ ನಗರದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ 2.30ಕ್ಕೆ ಈ ಘಟನೆ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿತ್ತು. ಆದ್ರೆ ಮನೆ ಮಂದಿಯ ಪ್ರಾಣ ರಕ್ಷಿಸುವಲ್ಲಿ ಅವರು ಯಶ ಕಾಣಲಿಲ್ಲ.
ಘಟನಾ ಸ್ಥಳದಲ್ಲಿ ಸ್ಥಳೀಯ ನಿವಾಸಿಗಳು ಹಾಗು ಪೊಲೀಸರು ಈ ಮನೆಯನ್ನು ಆಶುತೋಷ್ ಎಂಬವರು ಉಮಾಶಂಕರ್ಗೆ ಬಾಡಿಗೆಗೆ ಕೊಟ್ಟಿದ್ದರು. ರಾತ್ರಿ ಮಲಗಿದ್ದ ವೇಳೆ ಅಚಾನಕ್ ಆಗಿ ಮನೆಯ ಛಾವಣಿ ಕುಸಿದು ಬಿದ್ದಿದೆ. ಉಮಾಶಂಕರ್, ಗುಡಿಯಾ, ಶುಭಂ, ಸೌರಭ್ ಮತ್ತು ಸಂಧ್ಯಾ ಛಾವಣಿ ಅಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿದ ಸಿಎಂ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಳೆಯ ಕಟ್ಟಡವಾದ ಕಾರಣ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.