ಕರ್ನಾಟಕ

karnataka

ETV Bharat / bharat

ಕೋವಿಶೀಲ್ಡ್​ ಲಸಿಕೆ ಮಾಡಿದ ಜಾದು: ಮಾತು ನಿಂತು ಹೋಗಿದ್ದ ವ್ಯಕ್ತಿಗೆ ಬಂತು ಮಾತು!

ಕೋವಿಡ್​ ವ್ಯಾಕ್ಸಿನ್ ಕೋವಿಶೀಲ್ಡ್‌​ ಪಡೆದ ನಂತರ ವ್ಯಕ್ತಿಯೋರ್ವನ ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಕಾಣಿಸಿಕೊಂಡಿದ್ದು, ಕಳೆದ ಐದು ವರ್ಷಗಳ ನಂತರ ನಿಂತು ಹೋಗಿದ್ದ ಮಾತು ಪುನಃ ಬಂದಿದೆ ಎನ್ನಲಾಗ್ತಿದೆ.

miracle of corona vaccine in jharkhand
miracle of corona vaccine in jharkhand

By

Published : Jan 12, 2022, 4:07 PM IST

ಬೊಕಾರೊ(ಜಾರ್ಖಂಡ್):ಇಡೀ ಪ್ರಪಂಚದ ಜನರ ನೆಮ್ಮದಿ ಹಾಳು ಮಾಡಿರುವ ಕೊರೊನಾಗೆ ದೇಶದಲ್ಲಿ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್​ ಲಸಿಕೆ ನೀಡಲಾಗ್ತಿದೆ. ಈಗಾಗಲೇ ಕೋಟ್ಯಂತರ ಜನರು ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ.

ಹಳ್ಳಿಗಳಲ್ಲಿ ಇದರ ಬಗ್ಗೆ ಅನೇಕರು ನಕಾರಾತ್ಮಕ ಭಾವನೆ ಹೊಂದಿದ್ದು, ವ್ಯಾಕ್ಸಿನ್​ ಪಡೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಆದರೆ, ಕೆಲವೊಂದು ಹಳ್ಳಿಗಳಲ್ಲಿ ವ್ಯಾಕ್ಸಿನ್​ ಪಡೆದ ಜನರಲ್ಲಿ ಅನೇಕ ರೀತಿಯ ಸಕಾರಾತ್ಮಕ ಅಂಶಗಳು ಕಂಡುಬಂದಿವೆ. ಇದಕ್ಕೊಂದು ತಾಜಾ ಉದಾಹರಣೆ ಸಿಕ್ಕಿದೆ.

ಜಾರ್ಖಂಡ್​ ರಾಜ್ಯದ ಬೊಕಾರೊದಲ್ಲಿ ಕೋವಿಡ್​ ಲಸಿಕೆ ಕೋವಿಶೀಲ್ಡ್​ ಪಡೆದ ವಾರದ ನಂತರ ವ್ಯಕ್ತಿಯೋರ್ವನ ದೇಹದಲ್ಲಿ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿದೆ. ಕಳೆದ ಐದು ವರ್ಷಗಳ ನಂತರ ಆತನಿಗೆ ಮಾತು ಮರಳಿ ಬಂದಿದೆ. ಅಷ್ಟೇ ಅಲ್ಲ, ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡಲು ಶುರು ಮಾಡಿವೆ.

ಜಾರ್ಖಂಡ್​ನಲ್ಲಿ ಕೋವಿಶೀಲ್ಡ್​ ಲಸಿಕೆ ಮಾಡಿದ ಜಾದು

ಕೆಲವೇ ವಾರಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ನರ್ಸ್​ ಜೊತೆ ಸೇರಿ 55 ವರ್ಷದ ದುಲರ್​ ಚಂದ್​ ಮುಂಡಾ ಅವರಿಗೆ ಕೋವಿಶೀಲ್ಡ್​​ ವ್ಯಾಕ್ಸಿನ್​ ನೀಡಿದ್ದಾರೆ. ಇದಾದ ಬಳಿಕ ಈ ಎಲ್ಲ ಬದಲಾವಣೆಗಳು ಕಂಡು ಬಂದಿವೆಯಂತೆ.

ಇದನ್ನೂ ಓದಿ:ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ನಟ ಅಜಯ್​ ದೇವಗನ್

ಸಲ್ಗಡಿ ಗ್ರಾಮದ ದುಲರ್​ಚಂದ್ ಮುಂಡಾ ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇವರು ಚಿಕಿತ್ಸೆಯ ನಂತರ ಗುಣಮುಖರಾಗಿದ್ದರೂ ದೈಹಿಕ ನ್ಯೂನತೆಗಳಿಂದಾಗಿ ಹಾಸಿಗೆ ಹಿಡಿದಿದ್ದರು. ದಿನದಿಂದ ದಿನಕ್ಕೆ ಅವರ ಧ್ವನಿಯೂ ಕ್ಷೀಣಿಸಲು ಶುರುವಾಗಿ ಮಾತನಾಡಲು ತೊದಲುತ್ತಿದ್ದರು.

ಜನವರಿ 4ರಂದು ಇವರಿಗೆ ಕೋವಿಡ್ ಮೊದಲ ಡೋಸ್ ಆಗಿ​ ಕೋವಿಶೀಲ್ಡ್ ಲಸಿಕೆ​​ ನೀಡಲಾಗಿದೆ. ಇದಾದ ಬಳಿಕ ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಕಾಣಿಸಿಕೊಂಡಿದ್ದು, ಸ್ಪಷ್ಟವಾಗಿ ಮಾತನಾಡುವುದರ ಜೊತೆಗೆ ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡುತ್ತಿವೆ ಎಂದು ತಿಳಿದು ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೈದ್ಯಾಧಿಕಾರಿ ಡಾ. ಅಲ್ಬೆಲ್ ಕೆರ್ಕೆಟ್, ಇದೊಂದು ಸಂಶೋಧನೆಯ ವಿಷಯವಾಗಬಹುದು, ನಿಜಕ್ಕೂ ಆತನ ದೇಹದಲ್ಲಿ ಇಷ್ಟೊಂದು ಬದಲಾವಣೆ ಕಂಡು ಬಂದಿರುವುದು ಅಚ್ಚರಿಯಾಗುತ್ತಿದೆ ಎಂದಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಓರ್ವ ಅಜ್ಜಿಗೆ ವ್ಯಾಕ್ಸಿನ್ ಪಡೆದುಕೊಂಡ ಬಳಿಕ ದೃಷ್ಟಿ ಮರಳಿ ಬಂದಿತ್ತು.

ABOUT THE AUTHOR

...view details