ನವದೆಹಲಿ:ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಪದಕದೊಂದಿಗೆ ಹಿಂದಿರುಗುವ ಮಾತು ಕೊಟ್ಟಿದ್ದರು ಎಂದು ಕಾನೂನು ಸಚಿವ ಕಿರಣ್ ರಿಜಿಜು ನೆನಪಿಸಿಕೊಂಡರು.
ಒಲಿಂಪಿಕ್ಸ್‌ನ ಮೊದಲ ದಿನದಂದು ಪದಕ ಗೆಲ್ಲುವುದು ಬಹಳ ವಿಶೇಷವಾಗಿದೆ. ಟೋಕಿಯೋದಲ್ಲಿ ಶನಿವಾರ ದೇಶದ ಪದಕಗಳ ಖಾತೆ ತೆರೆಯಲು 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಚಾನು ಶುಭಾರಂಭ ಮಾಡಿದ್ದಾರೆ ಎಂದರು.
26 ವರ್ಷದ ಮೀರಾಬಾಯಿ ಚಾನು ಅವರು ಒಂದು ಭರವಸೆಯೊಂದಿಗೆ ಟೋಕಿಯೋಗೆ ತೆರಳಿದ್ದರು. ಈ ಹಿಂದೆ ನಾನು ಕ್ರೀಡಾ ಸಚಿವ ಆಗಿದ್ದಾಗ ನನಗೆ ಮಾತು ಕೊಟ್ಟಿದ್ದರು. ಟೋಕಿಯೋದಲ್ಲಿ (ಒಲಿಂಪಿಕ್ಸ್) ದೇಶಕ್ಕಾಗಿ ಪದಕ ಗೆಲ್ಲುತ್ತೇನೆ ಎಂದಿದ್ದರು ಎಂದು ರಿಜಿಜು ನೆನಪಿಸಿಕೊಂಡರು.
ಗಾಯದ ನಂತರ ವೇಟ್‌ಲಿಫ್ಟರ್ ಅನ್ನು ಕಂಡೀಷನಿಂಗ್ ಮತ್ತು ತರಬೇತಿಗಾಗಿ ಯುಎಸ್‌ಗೆ ಕಳುಹಿಸಿದಾಗ ಚಾನು ಅವರ ಭೌತಚಿಕಿತ್ಸಕ, ತರಬೇತುದಾರ, ಅವರ ತಾಂತ್ರಿಕ ತಂಡ ಮತ್ತು ಭಾರತದ ಕ್ರೀಡಾ ಪ್ರಾಧಿಕಾರದ ನಡುವಿನ ಸಮನ್ವಯವನ್ನು ಸಚಿವರು ಶ್ಲಾಘಿಸಿದರು.
ಓದಿ:Tokyo Olympics: ಈ ಬೆಳ್ಳಿ ಪದಕ ಇಡೀ ದೇಶಕ್ಕೆ ಅರ್ಪಣೆ : ಮೀರಾಬಾಯಿ ಚಾನು