ಕರ್ನಾಟಕ

karnataka

ETV Bharat / bharat

ತಂದೆಗೆ ಲಿವರ್​ ದಾನ ಮಾಡುವ ಬಾಲಕಿಯ ಇಚ್ಛೆಗೆ ಹೈಕೋರ್ಟ್​​ ಅಸಮ್ಮತಿ - ಬಾಂಬೆ ಹೈಕೋರ್ಟ್

ಕಾನೂನಿನಲ್ಲಿ ಅಪ್ರಾಪ್ತರು ಅಂಗಾಂಗ ದಾನ ಮಾಡಲು ಅವಕಾಶ ಇಲ್ಲದೇ ಇರುವುದು ಮತ್ತು ಬಾಲಕಿಯ ಹಿತದೃಷ್ಟಿಯಿಂದ ಲಿವರ್​ ದಾನಕ್ಕೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್​​ ಹೇಳಿದೆ.

ಬಾಂಬೆ ಹೈಕೋರ್ಟ್​​ ಅಸಮ್ಮತಿ
Bombay High Court

By

Published : May 14, 2022, 9:25 PM IST

ಮುಂಬೈ (ಮಹಾರಾಷ್ಟ್ರ): ತನ್ನ ಅನಾರೋಗ್ಯ ಪೀಡಿತ ತಂದೆಗೆ ಲಿವರ್​ (ಯಕೃತ್ತು) ದಾನ ಮಾಡಲು ಮುಂದಾಗಿದ್ದ ಬಾಲಕಿಯ ಇಚ್ಛೆಗೆ ಬಾಂಬೆ ಹೈಕೋರ್ಟ್​​ ಅಸಮ್ಮತಿ ಸೂಚಿಸಿದೆ. ಬಾಲಕಿಯ ಹಿತದೃಷ್ಟಿಯಿಂದ ಲಿವರ್​ ದಾನ ಮಾಡಲು ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಉಚ್ಛ ನ್ಯಾಯಾಲಯ ಹೇಳಿದೆ.

ಬಾಲಕಿಯ ತಂದೆ ಅನೇಕ ವರ್ಷಗಳಿಂದ ಲಿವರ್​ ಸಮಸ್ಯೆಯಿಂದ ಬಳಲುತ್ತಿದ್ದು, ತಂದೆಗಾಗಿ ತನ್ನ ಲಿವರ್​ ದಾನ ಮಾಡಲು ಇಚ್ಛಿಸಿದ್ದಳು. ಸರ್ಕಾರದ ಅಂಗಾಂಗ ಕಸಿ ಕಾಯ್ದೆಯ ನಿಬಂಧನೆಗಳ ಪ್ರಕಾರ ನಿನಗೆ ಲಿವರ್​ ದಾನ ಮಾಡಲು ಅವಕಾಶ ಇಲ್ಲ ಎಂದು ಅಧಿಕಾರಿಗಳ ಸಮಿತಿಯು ಬಾಲಕಿಯ ಮನವಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಆ ಬಾಲಕಿ ತನ್ನ ತಾಯಿ ಮೂಲಕ ವಕೀಲರ ಸಹಾಯದೊಂದಿಗೆ ಹೈಕೋರ್ಟ್​​ ಮೊರೆ ಹೋಗಿದ್ದಳು.

ನನ್ನ ತಂದೆಗೆ ಲಿವರ್​ ದಾನ ಮಾಡಲು ಅನುಮತಿ ಕೊಡುವಂತೆ ನ್ಯಾಯಾಲಯದ ಮುಂದೆ ಬೇಡಿಕೆ ಮಂಡಿಸಿದ್ದಳು. ಆದರೆ, ನ್ಯಾಯಾಲಯ ಕೂಡ ಬಾಲಕಿಯ ಮನವಿಯಲ್ಲಿ ತಿರಸ್ಕರಿಸಿದೆ. ಬಾಲಕಿಯು ಇನ್ನೂ ಅಪ್ರಾಪ್ತೆಯಾಗಿರುವುದರಿಂದ ದಾನ ಮಾಡುವಂತಿಲ್ಲ ಎಂದು ಸರ್ಕಾರದ ಸಮಿತಿ ಸಹ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ತಂದೆಯು ಕಡಿತಕ್ಕೆ ದಾಸನಾಗಿರುವುದರಿಂದ ಲಿವರ್​ ತೊಂದರೆಯಾಗಿದೆ. ಅಲ್ಲದೇ, ಬಾಲಕಿಯು ಒಬ್ಬಳೆ ಮಗಳಾಗಿದ್ದು, ಭಾವನಾತ್ಮಕ ಒತ್ತಡದಿಂದ ಲಿವರ್​ ದಾನ ಮಾಡಲು ಮುಂದಾಗಿದ್ದಾಳೆ. ಶಸ್ತ್ರಚಿಕಿತ್ಸೆಯ ಸಾಧಕ - ಬಾಧಕಗಳ ಬಗ್ಗೆ ತಾಯಿ ಮತ್ತು ಮಗಳಿಗೆ ಸರಿಯಾದ ಮಾಹಿತಿ ಕೊರತೆ ಎಂದು ನ್ಯಾಯಾಲಯಕ್ಕೆ ಸಲ್ಲಿಕೆಯಾದ ವರದಿಯಲ್ಲಿ ತಿಳಿಸಲಾಗಿತ್ತು. ಆದ್ದರಿಂದ ನ್ಯಾಯಾಲಯವು ಇದನ್ನು ಪರಿಗಣಿಸುವುದರೊಂದಿಗೆ ಬಾಲಕಿಯ ಹಿತದೃಷ್ಟಿಯಿಂದ ಲಿವರ್​ ದಾನಕ್ಕೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ:ನ್ಯಾಯದ ನಿರಾಕರಣೆ ಅರಾಜಕತೆಗೆ ಕಾರಣವಾಗಲಿದೆ: ಸಿಜೆ ರಮಣ ಆತಂಕ

ABOUT THE AUTHOR

...view details