ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಅಪ್ರಾಪ್ತೆ ಮೇಲೆ ಮೂರನೇ ಬಾರಿಗೆ ಲೈಂಗಿಕ ದೌರ್ಜನ್ಯ - ನಿರ್ಭಯಾ ಶಿಶುಪಾಲನಾ ಕೇಂದ್ರ

ಕೇರಳದ ಮಲಪ್ಪುರಂ ಜಿಲ್ಲೆಯ ಅಪ್ರಾಪ್ತೆಯೊಬ್ಬಳು ನಿರ್ಭಯಾ ಶಿಶುಪಾಲನಾ ಕೇಂದ್ರದಿಂದ ಬಿಡುಗಡೆಯಾದ ನಂತರ ಆಕೆಯ ಮೇಲೆ ಮೂರನೇ ಬಾರಿಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. 2016 ಮತ್ತು 2017 ರಲ್ಲಿ ಈ ಹಿಂದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು.

ಲೈಂಗಿಕ ದೌರ್ಜನ್ಯ
ಲೈಂಗಿಕ ದೌರ್ಜನ್ಯ

By

Published : Jan 18, 2021, 5:22 PM IST

ಮಲಪ್ಪುರಂ (ಕೇರಳ): ಈ ಹಿಂದೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ ಅಪ್ರಾಪ್ತೆಯೊಬ್ಬಳು, ಸಾಂತ್ವನ ಕೇಂದ್ರದಿಂದ ಬಿಡುಗಡೆಯಾದ ನಂತರ ಮತ್ತೆ ಮೂರನೇ ಬಾರಿಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ.

ವರದಿಗಳ ಪ್ರಕಾರ, ಪಾಂಡಿಕ್ಕಾಡ್ ಮೂಲದ 17 ವರ್ಷದ ಬಾಲಕಿ ಈ ಹಿಂದೆ 2016 ಮತ್ತು 2017 ರಲ್ಲಿ ಹದಿಮೂರು ವರ್ಷದವಳಿದ್ದಾಗ ಎರಡು ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು.

ಓದಿ:ಕುಲ್ಗಾಮ್​ನಲ್ಲಿ ತೀವ್ರ ಚಳಿಗೆ ಮಕ್ಕಳಿಬ್ಬರ ಸಾವು

ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯನ್ನು ನಿರ್ಭಯಾ ಶಿಶುಪಾಲನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು.

ಮಕ್ಕಳ ರಕ್ಷಣಾ ಅಧಿಕಾರಿಯ ವರದಿಯ ಪ್ರಕಾರ, ಅಪ್ರಾಪ್ತ ಬಾಲಕಿಯನ್ನು ಬಳಿಕ ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಆದರೆ ಶಿಶುಪಾಲನಾ ಕೇಂದ್ರದಿಂದ ಹೊರಬಂದ ನಂತರ ಬಾಲಕಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ.

ABOUT THE AUTHOR

...view details