ಕರ್ನಾಟಕ

karnataka

ETV Bharat / bharat

ಬಿಹಾರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಓರ್ವನ ಬಂಧನ - ಈಟಿವಿ ಭಾರತ ಕನ್ನಡ

ಬಿಹಾರದಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ - ಬಾಲಕಿ ಸ್ಥಿತಿ ಗಂಭೀರ - ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯ

Minor raped in Chhapra
ಬಿಹಾರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಓರ್ವನ ಬಂಧನ

By

Published : Jan 16, 2023, 10:16 PM IST

ಸಾರಣ್​(​ಬಿಹಾರ): ಹನ್ನೆರಡು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬಿಹಾರದ ಛಾಪ್ರಾದಲ್ಲಿ ಬೆಳಕಿಗೆ ಬಂದಿದೆ. ನಾಲ್ವರು ಆರೋಪಿಗಳು ಸೇರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಬಾಲಕಿಯ ಸ್ಥಿತಿ ಗಂಭೀರವಾಗಿದೆ.

ಬಾಲಕಿಯ ಸ್ಥಿತಿ ಗಂಭೀರ: ಭಾನುವಾರ ಬಾಲಕಿಯು ತನ್ನ ಕೆಲಸ ನಿಮಿತ್ತ ಮನೆಯಿಂದ ಹೊರಟಿದ್ದರು. ಈ ಸಂದರ್ಭದಲ್ಲಿ ಬಾಲಕಿ ಸ್ನೇಹಿತನು ಜೊತೆಗಿದ್ದ. ನಾಲ್ವರು ಆರೋಪಿಗಳು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೋಯ್ದು ಅತ್ಯಾಚಾರ ಎಸಗಿದ್ದಾರೆ. ಘಟನೆ ಬಳಿಕ ಬಾಲಕಿ ಮನೆಗೆ ಬಂದು ಪೋಷಕರಿಗೆ ಈ ವಿಷಯ ತಿಳಿಸಿದ್ದು, ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ತೀವ್ರ ರಕ್ತ ಸ್ರಾವದಿಂದಾಗಿ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸ್ಥಳದಿಂದ ಪರಾರಿಯಾದ ಆರೋಪಿಗಳು:ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಬಾಲಕಿ ಹೇಗೋ ಮನೆಗೆ ತಲುಪಿ ಕುಟುಂಬ ಸದಸ್ಯರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಬಗ್ಗೆ ಕುಟುಂಬ ಸದಸ್ಯರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಗುರುತು ಪತ್ತೆ ಹಚ್ಚಲು ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಸಂತ್ರಸ್ತೆ ಇಬ್ಬರು ಆರೋಪಿಗಳನ್ನು ಗುರುತಿಸಿದ್ದು, ಈ ಪೈಕಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ಆರೋಪಿ ಬಾಲಕಿಯ ಸ್ವಗ್ರಾಮದವನು ಎಂದು ತಿಳಿದುಬಂದಿದೆ. ಸಂತ್ರಸ್ತೆಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಅತ್ಯಾಚಾರ ವಿರುದ್ಧ ಗ್ರಾಮಸ್ಥರ ಆಕ್ರೋಶ: ಛಾಪ್ರಾದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸಂತ್ರಸ್ತ ಬಾಲಕಿಯ ತಂದೆ ಈಗಾಗಲೇ ತೀರಿಕೊಂಡಿದ್ದು, ಕುಟುಂಬದ ಸದಸ್ಯರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಯುಪಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಮತ್ತೊಂದು ಕಡೆ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕ್ರೌರ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿತ್ತು. ಇಲ್ಲಿನ ದೇಹಾತ್ ಕೊತ್ವಾಲಿ ಪ್ರದೇಶದಲ್ಲಿ ಮಹಿಳೆಯ ಮೇಲೆ ಸಾಮೂಹಿ ಅತ್ಯಾಚಾರ ನಡೆದಿತ್ತು. ಈ ವೇಳೆ ಇಬ್ಬರು ಅತ್ಯಾಚಾರ ಎಸಗಿರುವುದಲ್ಲದೇ ಮತ್ತೋರ್ವ ವ್ಯಕ್ತಿ ಮಹಿಳೆಯ ಖಾಸಗಿ ಅಂಗಕ್ಕೆ ಗಾಜಿನ ಬಾಟಲಿ ಹಾಕಿ ಕ್ರೌರ್ಯ ಎಸಗಿದ್ದ.

ಕಳೆದ ಶನಿವಾರದಂದು ತಡರಾತ್ರಿ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಬಾಂದ್ರಾಗೆ ತೆರಳುತ್ತಿದ್ದರು. ಈ ವೇಳೆ, ಮಹಿಳೆಯ ಪತಿಯೊಂದಿಗೆ ಇತರೆ ಮೂರು ಜನ ಇನ್ನೊಂದು ಬೈಕ್​ನಲ್ಲಿ ಬಂದಿದ್ದಾರೆ. ದಾರಿ ಮಧ್ಯೆ ಈ ಮೂವರು ಮತ್ತು ದಂಪತಿ ಮದ್ಯಪಾನ ಮಾಡಿ ನಶೆ ಏರಿಸಿಕೊಂಡಿದ್ದಾರೆ. ಮಹಿಳೆಯ ಪತಿಯನ್ನು ಸಿಗರೇಟ್ ಖರೀದಿಸಲು ಈ ಮೂವರು ಕಳುಹಿಸಿದ್ದರು. ಬಳಿಕ ನಶೆಯಲ್ಲಿದ್ದ ಮಹಿಳೆ ಮೇಲೆ ಇಬ್ಬರು ಅತ್ಯಾಚಾರ ಎಸಗಿ, ಮತ್ತೋರ್ವ ವಿಕೃತಿ ಮೆರೆದಿದ್ದ.

ಇದನ್ನೂ ಓದಿ :ಯುಪಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ABOUT THE AUTHOR

...view details