ಬಾರಾಬಂಕಿ (ಉತ್ತರ ಪ್ರದೇಶ):ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ವಿಚಾರವಾಗಿ ಸಂತ್ರಸ್ತೆಯ ತಂದೆ, ಜಿಲ್ಲೆಯ ಅಸಂದ್ರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಸಂತ್ರಸ್ತೆಯ ಪತಿ ಸೇರಿ ಏಳು ಜನರನ್ನು ಬಂಧಿಸಿದ್ದಾರೆ. ಬಾಲಕಿಯು ಮಗುವಿಗೆ ಜನ್ಮ ನೀಡಿದ್ದರಿಂದ, ಮಗು ಯಾರದ್ದೆಂದು ತಿಳಿಯಲು ಆರೋಪಿಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ನನ್ನ ಮಗಳು ಕಳೆದ ಏಳು ತಿಂಗಳಿಂದ, ಆರೋಪಿಯ ಮನೆಯಲ್ಲಿದ್ದಳು. ಈ ವೇಳೆ, ನನ್ನ ಅಳಿಯ ಸೇರಿ ಏಳು ಜನರು ನನ್ನ ಮಗಳ ಮೇಳೆ ಅತ್ಯಾಚಾರ ನಡೆಸಿದ್ದು, ಆಕೆ ಗರ್ಭ ಧರಿಸಿದ್ದಳು. ಅಲ್ಲದೇ, ಆಕೆ ಗರ್ಭಪಾತ ಮಾಡುವಂತೆ ಹಲ್ಲೆ ನಡೆಸಿದ್ದಾರೆ ಎಂದು ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.