ಕರ್ನಾಟಕ

karnataka

ETV Bharat / bharat

45 ವರ್ಷದ ವ್ಯಕ್ತಿ ಜೊತೆ 16ರ ಬಾಲೆಯ ಮದುವೆ, ಹೆಣ್ಣು ಮಗುವಿಗೆ ಜನ್ಮ; 22 ವರ್ಷದ ಯುವಕನೊಂದಿಗೆ ಪರಾರಿ! - 45 ವರ್ಷದ ವ್ಯಕ್ತಿ ಜೊತೆ 16ರ ಬಾಲೆಯ ಮದುವೆ

45 ವರ್ಷದ ವ್ಯಕ್ತಿ ಜೊತೆ 16ರ ಬಾಲೆಯ ಮದುವೆ ಮಾಡಲಾಗಿದ್ದು, ಈಗಾಗಲೇ ಹೆಣ್ಣು ಮಗುವಿನ ಜನನವಾಗಿದೆ. ಇದೀಗ ಆತನೊಂದಿಗೆ ಸಂಸಾರ ನಡೆಸಲು ಹಿಂದೇಟು ಹಾಕಿರುವ ಬಾಲೆ 22ರ ಯುವಕನೊಂದಿಗೆ ಪರಾರಿಯಾಗಿದ್ದಾಳೆ.

Minor girl married to old man in Dholpur
Minor girl married to old man in Dholpur

By

Published : Mar 22, 2022, 9:20 PM IST

ಧೋಲ್‌ಪುರ(ರಾಜಸ್ಥಾನ):ಇಲ್ಲಿನಸದರ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ 45 ವರ್ಷದ ವ್ಯಕ್ತಿಯೋರ್ವನೊಂದಿಗೆ 16ರ ಅಪ್ರಾಪ್ತೆಯನ್ನು ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಒಂದು ಹೆಣ್ಣು ಮಗ ಸಹ ಜನಿಸಿದ್ದು, ಇದೀಗ ಆತನೊಂದಿಗೆ ಜೀವನ ನಡೆಸಲು ಹಿಂದೇಟು ಹಾಕಿರುವ ಬಾಲೆ, 22ರ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ರಾಜಸ್ಥಾನದ ಧೋಲ್​ಪುರದಲ್ಲಿ ಈ ಘಟನೆ ನಡೆದಿದೆ.

ಅಪ್ರಾಪ್ತೆ ಗಂಡನೊಂದಿಗೆ ಜೀವನ ನಡೆಸಲು ಹಿಂದೇಟು ಹಾಕಿದ್ದು, 22 ವರ್ಷದ ಸೋದರಳಿಯನೊಂದಿಗೆ ಪರಾರಿಯಾಗಿದ್ದಾಳೆ. ಇದರ ಬೆನ್ನಲ್ಲೇ ಅಪಹರಣ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತೆಯನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪ್ರಾಪ್ತೆಯನ್ನು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ಮುಂದೆ ಹಾಜರುಪಡಿಸಲಾಗಿದ್ದು, ಕೌನ್ಸೆಲಿಂಗ್​ ನಡೆಸಿದ ಬಳಿಕ ಸಖಿ ಒನ್​ ಸೆಂಟರ್​​​ನಲ್ಲಿ ಇಡಲಾಗಿದೆ.

ಇದನ್ನೂ ಓದಿ:ವಿಡಿಯೋ: ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಟೈರ್​​ನಲ್ಲಿ ಸಿಲುಕಿ ಮಹಿಳೆ ಸಾವು

ಸದಸ್ಯರು ತಿಳಿಸಿರುವ ಪ್ರಕಾರ, ಬಾಲಕಿ ಮಧ್ಯಪ್ರದೇಶದ ನಿವಾಸಿಯಾಗಿದ್ದು, ಒಂದೂವರೆ ವರ್ಷದ ಹಿಂದೆ ಆಕೆಯ ಇಚ್ಛೆಗೆ ವಿರುದ್ಧವಾಗಿ 45 ವರ್ಷದ ವ್ಯಕ್ತಿ ಜೊತೆ ಮದುವೆ ಮಾಡಿಸಿದ್ದರು. ಇದಾದ ಬಳಿಕ ಹೆಣ್ಣು ಮಗುವಿನ ಜನನವಾಗಿತ್ತು. ಆತನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದಿರುವ ಬಾಲಕಿ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ, ಈಗಾಗಲೇ ಮಗು ಹುಟ್ಟಿರುವ ಕಾರಣ ಆಕೆಯ ಮನವೊಲಿಕೆ ಕಾರ್ಯ ಮುಂದುವರೆದಿದೆ.

ABOUT THE AUTHOR

...view details