ಕರ್ನಾಟಕ

karnataka

ETV Bharat / bharat

ರಸ್ತೆಯಲ್ಲಿ ಬಿದ್ದಿದ್ದ ಗ್ರೆನೇಡ್ ಸ್ಫೋಟ..12 ವರ್ಷದ ಬಾಲಕ ಬಲಿ - ಜಗುನ್ ಪೊಲೀಸ್ ಠಾಣೆ

ಗ್ರೆನೇಡ್ ಇಲ್ಲಿಗೆ ಹೇಗೆ ಬಂದಿದೆ ಎಂಬುದು ನಮಗೂ ತಿಳಿದಿಲ್ಲ. ಈಗ ತನಿಖೆ ಆರಂಭಿಸಿದ್ದೇವೆ. ಶೀಘ್ರದಲ್ಲೇ ಮಾಹಿತಿ ಕಲೆಹಾಕಿ ಅಪರಾಧಿಗಳ ಬಂಧಿಸಲಿದ್ದೇವೆ ಎಂದು ಪೊಲೀಸರು ವಿವರಿಸಿದ್ದಾರೆ..

minor-killed-in-grenade-blast-in-assams-tinsukia
ರಸ್ತೆಯಲ್ಲಿ ಬಿದ್ದಿದ್ದ ಗ್ರೆನೇಡ್ ಸ್ಫೋಟ

By

Published : May 11, 2021, 5:04 PM IST

ಟಿನ್ಸುಕಿಯಾ (ಅಸ್ಸೋಂ): ಜಿಲ್ಲೆಯ ಜಗುನ್ ಪ್ರದೇಶದ ಕಥಾಕಥಾನಿಯಲ್ಲಿ ಗ್ರೆನೇಡ್ ಬಾಂಬ್ ಸ್ಫೋಟವಾಗಿದ್ದು, ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದಾನೆ.

ಮೃತಪಟ್ಟ ಬಾಲಕನನ್ನು 12 ವರ್ಷದ ಸುಜೋಯ್​ ಹಜೊಂಗ್ ಎಂದು ಗುರುತಿಸಲಾಗಿದೆ. ಈತ ರಸ್ತೆಯಲ್ಲಿ ಸೈಕಲ್​​ನಲ್ಲಿ ಬರುತ್ತಿದ್ದ ವೇಳೆ ಗ್ರೆನೇಡ್ ಬಿದ್ದಿರುವುದ ನೋಡಿ ಅದನ್ನು ಎತ್ತಿಕೊಂಡಿದ್ದಾನೆ.

ಈ ವೇಳೆ ಬಾಂಬ್​​​ ಸ್ಫೋಟಿಸಿದೆ. ಹೀಗಾಗಿ, ಬಾಲಕ ಗಂಭೀರವಾಗಿ ಗಾಯಗೊಂಡಿದ್ದ ಎಂದು ಜಗುನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಕ್ಷಣವೇ ಬಾಲಕನನ್ನು ಮಾರ್ಗರೀಟ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಗ್ರೆನೇಡ್ ಇಲ್ಲಿಗೆ ಹೇಗೆ ಬಂದಿದೆ ಎಂಬುದು ನಮಗೂ ತಿಳಿದಿಲ್ಲ. ಈಗ ತನಿಖೆ ಆರಂಭಿಸಿದ್ದೇವೆ. ಶೀಘ್ರದಲ್ಲೇ ಮಾಹಿತಿ ಕಲೆಹಾಕಿ ಅಪರಾಧಿಗಳ ಬಂಧಿಸಲಿದ್ದೇವೆ ಎಂದು ಪೊಲೀಸರು ವಿವರಿಸಿದ್ದಾರೆ.

ಇದನ್ನೂ ಓದಿ:ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಆರೋಪಿ, ಕುಟುಂಬಸ್ಥರಿಂದ ಹಲ್ಲೆ

ABOUT THE AUTHOR

...view details