ದೌಸಾ/ಪಾಟ್ನಾ :ಈ ಘಟನೆ ರಾಜಸ್ಥಾನದ ದೌಸಾದಲ್ಲೇ ಆದ್ರೂ ಸಹ ಇಡೀ ವಿಷಯ ಬಿಹಾರದ ಜೆಹಾನಾಬಾದ್‌ಗೆ ಸಂಬಂಧಿಸಿದೆ.
ಬಿಹಾರದ ಜೆಹಾನಾಬಾದ್‌ನಲ್ಲಿ ಕಳೆದ 3 ವರ್ಷಗಳ ಹಿಂದೆ ಬಾಲಕಿಯೊಬ್ಬಳನ್ನು ಅಪಹರಿಸಲಾಗಿತ್ತು. ಅಪಹರಿಸಿದ ಬಾಲಕಿಯನ್ನು ಮೊದಲು ಉತ್ತರಪ್ರದೇಶದಲ್ಲಿ ಬಳಿಕ ರಾಜಸ್ಥಾನದಲ್ಲಿ ಮಾರಾಟ ಮಾಡಿದ್ದರು. ಮೂರು ವರ್ಷಗಳಲ್ಲಿ ಎಷ್ಟು ಜನರು ಆಕೆಯನ್ನು ಖರೀದಿಸಿ ಮತ್ತೆ ಮಾರಾಟ ಮಾಡಿದ್ದಾರೆ. ಇಂತಹ ಘಟನೆಯನ್ನು ನಾನು ಮತ್ತೆ ನೆನೆಪಿಸಿಕೊಳ್ಳುವುದಿಲ್ಲವೆಂದು ಸಂತ್ರಸ್ತೆ ಹೇಳಿದ್ದಾಳೆ.
ಅಪಹರಣವಾಗಿದ್ದ ಬಾಲಕಿ 3 ವರ್ಷದ ಬಳಿಕ ಇಬ್ಬರು ಮಕ್ಕಳೊಂದಿಗೆ ಪತ್ತೆ ಬಾಲಕಿ ಕಳೆದು ಹೋದಾಗಿನಿಂದಲೂ ಸಂಬಂಧಿಕರು ಹುಡುಕುತ್ತಲೇ ಇದ್ದರು. ಆದರೆ, ಪೊಲೀಸರು ಸಹಕಾರದ ಹೆಸರಿನಲ್ಲಿ ಬಾಲಕಿಯ ಪಾತ್ರವನ್ನು ಪ್ರಶ್ನಿಸುತ್ತಾ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೂರು ವರ್ಷಗಳ ನಂತರ ಬಾಲಕಿ ಭೇಟಿಯಾದಾಗ ಅವಳ ಸಹೋದರ ಅವಳನ್ನು ನೋಡಿ ಆಶ್ಚರ್ಯಪಟ್ಟನು. ಆಕೆಗೆ ಇನ್ನು ಮದುವೆಯಾಗಿಲ್ಲ. ಆದ್ರೆ, ಅವಳು ತಾಯಿಯಾಗಿದ್ದಳು. ಅವಳ ಮಡಿಲಲ್ಲಿ ಇಬ್ಬರು ಮುಗ್ಧ ಮಕ್ಕಳಿದ್ದವು. ಈ ಸ್ಥಿತಿಯಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಅಳುತ್ತಿದ್ದರು.
ಬಾಲಕಿ ನಾಪತ್ತೆ :ಮಾಹಿತಿಯ ಪ್ರಕಾರ, 2018ರ ಜೂನ್‌ನಲ್ಲಿ ಬಿಹಾರದ ಜೆಹಾನಾಬಾದ್‌ನಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು. ಈ ಘಟನೆಯ ನಂತರ ಕುಟುಂಬ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬವು ಆರೋಪಿಗಳ ಹೆಸರುಗಳನ್ನು ನೀಡಿತ್ತು.
ಆರೋಪಿಗಳು ಬಿಹಾರ ಮತ್ತು ಹಿಮಾಚಲಪ್ರದೇಶದ ನಿವಾಸಿಯಾಗಿದ್ದರು. ಈ ಗ್ಯಾಂಗ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಭಾಗಿಯಾಗಿದ್ದರು. ಈ ಗ್ಯಾಂಗ್ ಮೊದಲು ಬಾಲಕಿಯರನ್ನು ಬಂಧಿಸಿ, ನಂತರ ಅವರನ್ನು ಅಪಹರಿಸಿ ನೋಯ್ಡಾ ಮತ್ತು ರಾಜಸ್ಥಾನಕ್ಕೆ ರವಾನೆ ಮಾಡುತ್ತಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.
ಕುಟುಂಬ ಹುಡುಕುತ್ತಲೇ ಇತ್ತು :ತಮ್ಮ ಮನೆ ಮಗಳನ್ನು ಕುಟುಂಬ ಹುಡುಕುತ್ತಲೇ ಇತ್ತು. ಕುಟುಂಬವು ಪೊಲೀಸ್ ಠಾಣೆ ಸುತ್ತುತ್ತಲೇ ಇದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಪೊಲೀಸರು ಸಹಾಯದ ಹೆಸರಿನಲ್ಲಿ ಪ್ರತಿ ಬಾರಿಯೂ ತನಿಖೆ ಮಾಡುತ್ತಿದ್ದೇವೆ ಅಂತಾ ಹೇಳುತ್ತಲೇ ಇದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಬಾಲಕಿಯ ಸಹೋದರನಿಗೆ ತನ್ನ ಸಹೋದರಿ ರಾಜಸ್ಥಾನದ ದೌಸಾದಲ್ಲಿದ್ದಾಳೆಂದು ತಿಳಿದಿತ್ತು. ನಂತರ ಪೊಲೀಸ್ ಠಾಣೆಗೆ ತೆರಳಿದ ಸಹೋದರ ಬಿಹಾರ ಪೊಲೀಸರೊಂದಿಗೆ ದೌಸಾ ತಲುಪಿದನು. ನಂತರ ಬಿಹಾರ ಪೊಲೀಸರು ದೌಸಾದ ಸದರ್ ಪೊಲೀಸ್ ಠಾಣೆ ಸಹಯೋಗದೊಂದಿಗೆ ಗಂಗಲಿವಾಸ್ ಗ್ರಾಮವನ್ನು ತಲುಪಿ ಸಂತ್ರಸ್ತೆಯನ್ನು ಪತ್ತೆ ಹಚ್ಚಿದರು. ತದ ನಂತರ ತನ್ನ ಸಹೋದರನಿಗೆ ನಡೆದ ಘಟನೆಯ ಸಂಪೂರ್ಣ ಮಾಹಿತಿ ನೀಡಿದಳು. ಸಹೋದರಿಯ ಕೆಟ್ಟ ಅನುಭವಗಳನ್ನು ಕೇಳಿದ ನಂತರ ಸಹೋದರ ತುಂಬಾ ದುಃಖಿತನಾದನು.
ಆರೋಪಿಗಳಿಗಾಗಿ ಶೋಧ :ಮಾಧ್ಯಮಗಳೊಂದಿಗೆ ಮಾತನಾಡಿದ ಬಿಹಾರ ಪೊಲೀಸ್ ಎಸ್‌ಐ ರಂಜನ್ ಕುಮಾರ್, ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಬಾಲಕಿಯನ್ನು ಅಪಹರಿಸುವಲ್ಲಿ ತೊಡಗಿರುವ ಜನರು ಮತ್ತು ಅವರನ್ನು ಯಾರು ಮಾರಾಟ ಮಾಡಿದರು ಮತ್ತು ಎಲ್ಲಿ, ಯಾರು ಖರೀದಿದಾರರು ಸೇರಿದಂತೆ ಇಡೀ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.