ಕರ್ನಾಟಕ

karnataka

ETV Bharat / bharat

74 ವರ್ಷದ ವೃದ್ಧನಿಂದ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ವಿಷಯ ತಿಳಿದ ತಂದೆ ಆತ್ಮಹತ್ಯೆ - ಕೇರಳ

74 ವರ್ಷದ ಪ್ರಾವಿಷನ್ ಸ್ಟೋರ್ ಮಾಲಿಕ ತನ್ನ ಮಗಳ ಮೇಲಿನ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದು 42 ವರ್ಷದ ತಂದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

74 ವರ್ಷದ ವೃದ್ಧನಿಂದ 10 ವರ್ಷದ ಬಾಲಕಿ ಮೇಲೆ ಲೈಂಕಿಗ ದೌರ್ಜನ್ಯ
74 ವರ್ಷದ ವೃದ್ಧನಿಂದ 10 ವರ್ಷದ ಬಾಲಕಿ ಮೇಲೆ ಲೈಂಕಿಗ ದೌರ್ಜನ್ಯ

By

Published : Oct 25, 2021, 3:47 PM IST

Updated : Oct 25, 2021, 6:41 PM IST

ಕೊಟ್ಟಾಯಂ (ಕೇರಳ): ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ವೃದ್ಧ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಮತ್ತು 10 ವರ್ಷದ ಮಗಳಿಗೆ ಈ ರೀತಿ ಆಗಿದ್ದನ್ನು ಅರಿತು ಆಘಾತಕ್ಕೊಳಗಾದ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 74 ವರ್ಷದ ಪ್ರಾವಿಷನ್ ಸ್ಟೋರ್ ಮಾಲಿಕ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದಾಕ್ಷಣ 42 ವರ್ಷದ ತಂದೆ ಖಿನ್ನತೆಗೆ ಒಳಗಾಗಿ ನಂತರ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಕಟ್ಟಡದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು ಮತ್ತು ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಕಿರಾಣಿ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋದಾಗ ಅಂಗಡಿಯ ಮಾಲಿಕನಾದ ವೃದ್ಧ, ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆಯ ಪೋಷಕರು ಮಗುವಿನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಆಕೆಯನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.

Last Updated : Oct 25, 2021, 6:41 PM IST

ABOUT THE AUTHOR

...view details