ಮೊರಾದಾಬಾದ್ (ಉತ್ತರ ಪ್ರದೇಶ): ದೇಶದಲ್ಲಿ, ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಮಹಿಳೆಯರು-ಮಕ್ಕಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಕಾಮುಕನ ಬಲೆಗೆ ಸಿಕ್ಕ ಏಳು ವರ್ಷದ ಬಾಲಕಿ ಪ್ರಾಣ ಬಿಟ್ಟಿದ್ದಾಳೆ.
ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಕಾಂತ್ ಪ್ರದೇಶದಲ್ಲಿ ಕ್ರೂರಿಯೊಬ್ಬ ಅಪ್ರಾಪ್ತೆಯನ್ನು ಅಪಹರಿಸಿ, ಕಬ್ಬಿನ ಗದ್ದೆಗೆ ಹೊತ್ತೊಯ್ದು, ಅತ್ಯಾಚಾರ ಎಸಗಿದ್ದಲ್ಲದೇ ಬಾಲಕಿಯನ್ನು ಕೊಂದು ಬಿಸಾಕಿದ್ದಾನೆ.
ಕಳೆದ ಬುಧವಾರ ಬಾಲಕಿ ನಾಪತ್ತೆಯಾಗಿದ್ದು ಈ ಸಂಬಂಧ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವವನ್ನು ರೈತರೊಬ್ಬರು ಗಮನಿಸಿ ಶುಕ್ರವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.