ಕರ್ನಾಟಕ

karnataka

ETV Bharat / bharat

14ರ ಬಾಲೆ ಮೇಲೆ ಮಾಂತ್ರಿಕನಿಂದ ಅತ್ಯಾಚಾರ: ನೀಚ ಕೃತ್ಯಕ್ಕೆ ತಾಯಿಯಿಂದಲೇ ಸಹಕಾರ!? - ಗೋವಾ ಪೊಲೀಸರಿಂದ ಕಾಮುಕ ಮಾಂತ್ರಿಕ ಬಂಧನ

14 ವರ್ಷದ ಬಾಲಕಿಯ ಎಲ್ಲ ಆಸೆಗಳನ್ನು ಈಡೇರಿಸುವ ನೆಪದಲ್ಲಿ ಕಾಮುಕ ಮಾಂತ್ರಿಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

Minor girl raped by occultist in Goa
ಗೋವಾದಲ್ಲಿ ಬಾಲಕಿಯ ಮೇಲೆ ಮಾಂತ್ರಿಕನಿಂದ ಅತ್ಯಾಚಾರ

By

Published : Jun 1, 2022, 4:25 PM IST

ಪಣಜಿ (ಗೋವಾ): ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 50 ವರ್ಷದ ಮಾಂತ್ರಿಕನೊಬ್ಬನನ್ನು ಗೋವಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ನೀಚ ಕೃತ್ಯಕ್ಕೆ ಸಾಥ್​​ ನೀಡಿರುವ ಆರೋಪದ ಮೇಲೆ ಸಂತ್ರಸ್ತ ಬಾಲಕಿಯ ತಾಯಿಯನ್ನೂ ಬಂಧಿಸಲಾಗಿದೆ.

ರಮಾಕಾಂತ್ ನಾಯಕ್ ಅಲಿಯಾಸ್ ಬಾಬಾ ಎಂಬಾತನೇ ಬಂಧಿತ ಆರೋಪಿ. ಈತ ಇಲ್ಲಿನ ಉತ್ತರ ಗೋವಾದ ಥಿವಿಮ್ ಗ್ರಾಮದ ನಿವಾಸಿಯಾಗಿದ್ದು, 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.

ಬಾಲಕಿಯ ಜೀವನದಲ್ಲಿ ಆಕೆಯ ಎಲ್ಲ ಆಸೆಗಳನ್ನು ಈಡೇರಿಸುವ ನೆಪದಲ್ಲಿ ಮಾಂತ್ರಿಕ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್​ ಠಾಣೆಗೆ ದೂರು ಬಂದಿತ್ತು. ಜೊತೆಗೆ ಈತನಿಗೆ ನೊಂದ ಬಾಲಕಿಯ ತಾಯಿ ಕೂಡ ಸಹಕರಿಸಿದ್ದಾಳೆ ಎಂಬ ಮಾಹಿತಿ ಇದೆ. ಆದ್ದರಿಂದ ಇಬ್ಬರನ್ನೂ ಬಂಧಿಸಲಾಗಿದೆ. ಅಲ್ಲದೇ, ಪೋಕ್ಸೋ ಮತ್ತು ಮಕ್ಕಳ ಹಕ್ಕು ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಎಸ್​ಪಿ ಜಿವ್ಬಾ ದಳವಿ ತಿಳಿಸಿದ್ದಾರೆ.

ಇದನ್ನೂ ಓದಿ:ಮಗು ಸಮೇತ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ.. ನಂಜನಗೂಡಲ್ಲಿ ದುರಂತ

ABOUT THE AUTHOR

...view details