ಕರ್ನಾಟಕ

karnataka

ETV Bharat / bharat

ಬಾಲಕಿ ಮೇಲೆ ಆರು ಮಂದಿ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ! - ಅಪ್ರಾಪ್ತೆ ಮೇಲೆ ಅತ್ಯಾಚಾರ

ಅಪ್ರಾಪ್ತೆ ಮೇಲೆ ಆರು ಮಂದಿ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

minor girl gang raped in khunti
minor girl gang raped in khunti

By

Published : Apr 23, 2022, 6:47 PM IST

ಖೂಂಟಿ(ಜಾರ್ಖಂಡ್​​):10 ವರ್ಷದ ಬಾಲಕಿಯೋರ್ವಳ ಮೇಲೆ ಆರು ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಜಾರ್ಖಂಡ್​ನ ಖೂಂಟಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧನ ಮಾಡಲಾಗಿದ್ದು, ಮತ್ತೋರ್ವನಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ.

ತೊರ್ಪಾ ಬ್ಲಾಕ್​​ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಐವರು ಅಪ್ರಾಪ್ತರ ಬಂಧನ ಮಾಡಿ, ಮತ್ತೋರ್ವನಿಗೋಸ್ಕರ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರು 9ರಿಂದ 15ವರ್ಷದೊಳಗಿನವರಾಗಿದ್ದು, ಎಲ್ಲರೂ ಒಂದೇ ಶಾಲೆಯಲ್ಲಿ ಓದುತ್ತಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ:ವಿಡಿಯೋ: ನಿಂಬೆಗೂ ಬಂತು ಬಂಗಾರದ ಬೆಲೆ; 50 ಕೆಜಿ ಕದ್ದು ಪರಾರಿಯಾದ ಕಳ್ಳ

ಜಗಳದ ಬಳಿಕ ಬಾಲಕಿ ಮೇಲೆ ರೇಪ್​:ತೊರ್ಪಾ ಬ್ಲಾಕ್​ನ ಪಕ್ಕದ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಬಾಲಕಿ ಹಾಗೂ ಆರು ಬಾಲಕರು ಅಲ್ಲಿಗೆ ತೆರಳಿದ್ದರು. ಈ ವೇಳೆ ಯಾವುದೋ ವಿಷಯಕ್ಕೆ ಹುಡುಗಿಯೊಂದಿಗೆ ಜಗಳವಾಗಿದೆ. ರಾತ್ರಿ ವೇಳೆ ಬಾಲಕಿ ಒಂಟಿಯಾಗಿ ಮನೆಗೆ ಬರುತ್ತಿದ್ದಾಗ ಅಪ್ರಾಪ್ತ ಬಾಲಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮನೆಗೆ ಬಂದ ಸಂತ್ರಸ್ತೆ ಮನೆಯಲ್ಲಿ ಮಾಹಿತಿ ನೀಡಿದ್ದಾಳೆ.

ಘಟನೆ ಬಳಿಕ ಗ್ರಾಮದಲ್ಲಿ ಪಂಚಾಯ್ತಿ ನಡೆಸಿ, ಪ್ರಕರಣ ಇತ್ಯರ್ಥಪಡಿಸುವ ಪ್ರಯತ್ನ ನಡೆಸಲಾಗಿದೆ. ಆದರೆ, ಇದು ಫಲಕಾರಿಯಾಗದ ಕಾರಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ.

ABOUT THE AUTHOR

...view details