ಮೊರಾದಾಬಾದ್(ಉತ್ತರ ಪ್ರದೇಶ):ಪೋಷಕರ ಎದುರೇ ಅಪ್ರಾಪ್ತೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗೋಸ್ಕರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?:ಕಳೆದ 10 ದಿನಗಳ ಹಿಂದೆ ಅಪ್ರಾಪ್ತೆಯ ಸಹೋದರನೋರ್ವ ತಾನು ಪ್ರೀತಿಸಿದ್ದ ಯುವತಿ ಜತೆ ಪರಾರಿಯಾಗಿದ್ದ. ಎಷ್ಟು ಹುಡುಕಿದರೂ ಇವರು ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಯುವತಿ ಪೋಷಕರು ಯುವಕನ ಕುಟುಂಬಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಅವರ ಮನೆಗೆ ತೆರೆಳಿ ಇಡೀ ಕುಟುಂಬದ ಸದಸ್ಯರನ್ನು ಅಪಹರಣ ಮಾಡಿದ್ದಾರೆ. ಇದೇ ವೇಳೆ ಓಡಿಹೋಗಿರುವ ಸಹೋದರನ ಅಪ್ರಾಪ್ತ ಸಹೋದರಿ ಮೇಲೆ ಕುಟುಂಬದ ಸದಸ್ಯರ ಎದುರೇ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಆಕೆಗಿಂತಲೂ ವಯಸ್ಸಿನಲ್ಲಿ ಎರಡು ಪಟ್ಟು ಹೆಚ್ಚಿರುವ ವ್ಯಕ್ತಿ ಜತೆ ಮದುವೆ ಮಾಡಿಸಿದ್ದಾರೆ.